ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ-2 ತೆಗೆದುಕೊಳ್ಳುವ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವ ಅವಧಿಯನ್ನು ಏ.18ರವರೆಗೆ ವಿಸ್ತರಿಸಲಾಗಿದೆ.
ಅನುತ್ತೀರ್ಣರಾದವರು, ಪುನರಾವರ್ತಿತರು ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ಅಭ್ಯರ್ಥಿಗಳಿಗೆ ಆನ್ಲೈನ್ ಹಾಗೂ ಆಯಾ ಕಾಲೇಜುಗಳಲ್ಲಿ ಭೌತಿಕವಾಗಿ ಅರ್ಜಿ ಸಲ್ಲಿಸಲು ಏ.17ರವರೆಗೆ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳ ಕೋರಿಕೆಯಂತೆ ನೋಂದಣಿ ದಿನಾಂಕವನ್ನು ಒಂದು ದಿನ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಮಾಹಿತಿ ನೀಡಿದ್ದಾರೆ.
ಏ.30 ರಿಂದ ಪರೀಕ್ಷೆ ಆರಂಭ: ದ್ವಿತೀಯ ಪಿಯು ಪರೀಕ್ಷೆ-2 ಏ.30ರಿಂದ ಮೇ 13ರವರೆಗೆ ನಡೆಯಲಿದೆ. ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವವರು ಪ್ರತಿ ವಿಷಯಕ್ಕೆ ₹175 ಪಾವತಿಸಬೇಕು.


