This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ನಾಲ್ಕೂವರೆ ವರ್ಷಗಳಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿ ಪರ್ವ: ಲಕ್ಷ್ಮೀ ಹೆಬ್ಬಾಳಕರ Unprecedented development in Belgaum rural sector in four and a half years: Lakshmi Hebbalakar


 

ಬೆಳಗಾವಿ:
“ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದೆಂದೂ ಕಾಣದಂತ ಅಭಿವೃದ್ಧಿಯ ಪರ್ವ ಕಂಡಿದೆ. ಈ ಅವಧಿಯಲ್ಲಿ ಯಾವುದೇ ಜಾತಿ ರಾಜಕಾರಣ, ಭಾಷೆ ರಾಜಕಾರಣ ಮಾಡದೇ ಸರ್ವ ಜನಾಂಗಗಳ ಏಳಿಗೆಗಾಗಿ ಶ್ರಮಿಸಿದ್ದೇನೆ,” ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ರಾಜಹಂಸಗಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿಶಿಣ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗ್ರಾಮಸ್ಥರ ಜೊತೆ ಬೆರೆತು, ಗ್ರಾಮದಲ್ಲಿನ ಅಭಿವೃದ್ಧಿಯ ಕೆಲಸಗಳ ಬಗ್ಗೆ ಅವರು ಚರ್ಚಿಸಿದರು.
“ಕ್ಷೇತ್ರಾದ್ಯಂತ ಕಿರಿಯರಿಂದ ಹಿಡಿದು ಹಿರಿಯರವರೆಗೂ ಅವಿನಾಭಾವ ಸಂಬಂಧ ಹೊಂದಿದ್ದೇನೆ, ಅದರಂತೆ ನೀವೆಲ್ಲರೂ ಪ್ರೀತಿ, ಪ್ರೋತ್ಸಾಹ ಸಹಕಾರವನ್ನು ಉಡುಗೊರೆಯಾಗಿ ಕೊಟ್ಟಿದ್ದಿರಿ. ಇದೇ ತರಹ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಸದಾಕಾಲವೂ ನನ್ನ ಮೇಲಿರಲಿ ಎಂದು ಆಶಿಸುತ್ತೇನೆ,” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಸಿದ್ದಪ್ಪ ಛತ್ರೆ, ದತ್ತಾ ಪವಾರ್, ಬಾಹುರಾವ್ ಪವಾರ್, ನಾಗೇಂದ್ರ ನೀಲಜಕರ್, ಮಲ್ಲಿಕಾರ್ಜುನ ಲೋಕೂರ, ಸಂಜೀವ ಮಾದರ್, ಲಕ್ಷ್ಮೀ ಬಸ್ತವಾಡಕರ್, ಸುನೀತಾ ತೋರಾವತ್, ಸುಭದ್ರ ಕುಂಡೇಕರ್, ಆರತಿ ವಾಡೆಕರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply