ಬೆಳಗಾವಿ: ಲಿಂಗಾಯತ ಮಹಿಳಾ ಸಮಾಜ ಮತ್ತು ಕನ್ನಡ ಭವನ ವತಿಯಿಂದ ಸ್ಪಂದನ ಮೆಲೋಡೀಸ್ ಅರ್ಪಿಸುವ ಜಾನೇ ಕಹಾ ಗಯೇ ವೊ ದಿನ್ (ಕಪೂರ್ ಕುಟುಂಬದ ಹಾಡುಗಳು) ಕಾರ್ಯಕ್ರಮ ಏ. 16 ರಂದು ಸಂಜೆ 5 ಕ್ಕೆ ಇಲ್ಲಿಯ ನೆಹರು ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.
ಕೆಎಲ್ ಇ ಸ್ಕೂಲ್ ಆಫ್ ಮ್ಯೂಸಿಕ್ ಕೋ- ಆರ್ಡಿನೇಟರ್ ಡಾ.ರಾಜೇಂದ್ರ ಬಾಂಡನಕರ ಮತ್ತು ಮಿಡೋರಿ ಗಾರ್ಡನ್ ಸ್ಟೂಡಿಯೋ ಸ್ಥಾಪಕಿ ಬೀನಾ ಸಂಬರಗಿಮಠ ಉಪಸ್ಥಿತರಿರುವರು ಎಂದು ಸಂಘಟಕಿ ಶಾಂತಾ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


