ಬೆಳಗಾವಿ : ಜೂನ್ ತಿಂಗಳಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಕೊರತೆ ಎದುರಾಗಿತ್ತು. ಆದರೆ ಜುಲೈ ಆರಂಭದಲ್ಲಿ ಮಳೆ ಶುರುವಾಗಿದೆ. ರವಿವಾರ ವರುಣ ತುಸು ವಿರಾಮ ನೀಡಿದ್ದ. ಆದರೆ ಸೋಮವಾರ ಮಳೆಯ ವಾತಾವರಣ ಕಂಡುಬಂದಿದೆ. ಮಳೆಯಿಂದಾಗಿ ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ವಿವಿಧೆಡೆ ಹಾನಿಯಾಗಿರುವ ಘಟನೆ ಬೆಳಕಿಗೆ ಬಂದಿವೆ.
ಬುಡ ಸಹಿತ ಬಿದ್ದ ಮರ....
ಆರೇ ತಿಂಗಳ ಹಿಂದೆ
ಜನೆವರಿ ಒಂದರಂದು ಖರೀದಿಸಿದ Creta ಕಾರಿನ ಮೇಲೆ ಮರ ಬಿದ್ದಿದೆ. ಬೆಳಗಾವಿ ಹನುಮಾನ ನಗರದ ಕುವೆಂಪು
ನಗರದ ಪ್ರೆಸ್ ಕಾಲನಿಯಲ್ಲಿ ಸೋಮವಾರ ಮುಂಜಾನೆ
8.15 ಕ್ಕೆ ಮರ ಬಿದ್ದಾಗ ಕಾರು ನಿಲ್ಲಿಸುವ ಜಾಗೆಯಲ್ಲಿ ನಮ್ಮ ಚಾಲಕನೂ ಸಹಿತ ಯಾರೂ ಇರಲಿಲ್ಲ.ನಮ್ಮ ನಾಲ್ಕೈದು
ವಾಹನಗಳು ಒಂದೇ ಕಡೆಗೆ ಇವೆ.ಅರಣ್ಯ ಇಲಾಖೆಯ ಸಿಬ್ಬಂದಿ ಬಂದಿದ್ದಾರೆ.ಇನ್ಸೂರೆನ್ಸ್ ಕ್ಲೇಮ್ ಮಾಡಲು ಕಾರನ್ನು
ಹಂಡಾಯಿ ಕಂಪನಿಗೆ ಕಳಿಸುತ್ತಿದ್ದೇನೆ.
ಊರ ತುಂಬ ಗಿಡಗಳು,ಗಿಡದ ಟೊಂಗೆಗಳು ಬೀಳುತ್ತಿವೆ. ರಸ್ತೆಯಲ್ಲಿ ಹೋಗುವಾಗ ಜನರು ಎಚ್ಚರದಿಂದ ಹೋಗಬೇಕಾಗಿದೆ. ಸಣ್ಣ ಟೊಂಗೆ ಮೈಮೇಲೆ ಬಿದ್ದರು ಸಹ ಅನಾಹುತ ತಪ್ಪಿದ್ದಲ್ಲ ಎಂದು ಹಿರಿಯ ಪತ್ರಕರ್ತ
ಅಶೋಕ ಚಂದರಗಿ ಹೇಳಿದ್ದಾರೆ.