ಗದಗ: ತಾಲ್ಲೂಕಿನ ಅಂತೂರ ಬೆಂತೂರ ಗ್ರಾಮದ ಬೂದೀಶ್ವರ ಸಂಸ್ಥಾನಮಠದಲ್ಲಿ ರಾಚೋಟೇಶ್ವರ ಶಿವಾಚಾರ್ಯರ 60ನೇ ಮೌನಾನುಷ್ಠಾನ ಹಾಗೂ 16ನೇ ಶಿವಯೋಗ ಸಮಾಧಿ ಭಾನುವಾರ ಮುಕ್ತಾಯವಾಯಿತು.
ಆಹಾರ, ನೀರು, ಗಾಳಿ, ಬೆಳಕು ಇಲ್ಲದ ಜಾಗದಲ್ಲಿ 33 ದಿನ ತಪಸ್ಸು ಆಚರಿಸಿದ ಶ್ರೀಗಳನ್ನು, ಗೋಡೆ ಒಡೆದು ಹೊರಗೆ ಕರೆತರಲಾಯಿತು. ನಿತ್ರಾಣಗೊಂಡಿದ್ದ ಶ್ರಿಗಳನ್ನು ವಿವಿಧ ಮಠಾಧೀಶರು ಹೊತ್ತುಕೊಂಡು ಬಂದರು.
ಶ್ರೀಗಳ ದರ್ಶನ ಪಡೆಯಲು ಸಾವಿರಾರು ಭಕ್ತರು ಸೇರಿದ್ದರು. ಅವರು ಹೊರಬರುತ್ತಿದ್ದಂತೆ ದರ್ಶನ ಪಡೆಯಲು ಮುಗಿಬಿದ್ದರು. ಧಾರ್ಮಿಕ ವಿಧಿ- ವಿಧಾನ ನೆರವೇರಿಸಲಾಯಿತು. ಸ್ವಾಮೀಜಿ ಪರ ಜಯಘೋಷ ಮೊಳಗಿತು. ಜಾನಪದ ವಾದ್ಯಮೇಳಗಳು ಮೆರುಗು ತಂದವು.