ಇಟಗಿ: ಉತ್ತಮ ಶಿಕ್ಷಕರ ಮಾರ್ಗದರ್ಶನದಲ್ಲಿ ರೂಪುಗೊಳ್ಳುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುತ್ತಾರೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಗ್ರಾಮದ ಗಣೇಶ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರೇಅಂಗೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸೇವಾ ನಿವೃತ್ತಿ ಹೊಂದಿದ ಮುಖ್ಯಶಿಕ್ಷಕ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಎಸ್.ಎಚ್.ಬಾಗವಾನ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಹಲವು ದಶಕಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದ ಎಸ್.ಎಚ್.ಬಾಗವಾನ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಮೃತ್ಯುಂಜಯಸ್ವಾಮಿ ಹಿರೇಮಠ ಮಾತನಾಡಿ, ಎಸ್. ಎಚ್.ಬಾಗವಾನ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗದ ಅನೇಕ ತರಬೇತಿ ಪರಿಣಾಮಕಾರಿಯಾಗಿ ನೀಡುವ ಮೂಲಕ ಅವರ ಜ್ಞಾನ ಮತ್ತು ಕೌಶಲ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಬಿಳಕಿ-ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಮಾತನಾಡಿದರು. ರಾಣಿ ಶುಗರ್ಸ್ ಮಾಜಿ ಅಧ್ಯಕ್ಷ ಉದ್ಯಮಿ ನಾಸೀರ್ ಬಾಗವಾನ, ಮಾಜಿ ಉಪಾಧ್ಯಕ್ಷ ವಿರೇಶ ಕಂಬಳಿ, ಮಹಾಂತೇಶ ಕಮತಗಿ, ಅಶೋಕ ಮೂಲಿಮನಿ, ರಮೇಶ ಗೋಣಿ, ಬಿ.ಎಂ.ಹಿರೇಮಠ, ಮಲ್ಲಿಕಾರ್ಜುನ ಚವಲಗಿ, ಮಲ್ಲಿಕಾರ್ಜುನ ಗಾಣಗಿ, ಶಂಕರ ಕಮ್ಮಾರ, ಬಿ.ಎನ್.ಚಚಡಿ, ವಿ.ವೈ.ಯಕಾಜನವರ, ಪ್ರಕಾಶ ಶೆಟ್ಟನವರ, ಎಸ್.ವೈ.ಮಾದಿಗರ, ಬಸವರಾಜ ಯಡಾಲ ಇತರರಿದ್ದರು.