Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಾಲ್ನಡಿಗೆಯಲ್ಲೇ ತಿರುಪತಿಯ ತಿರುಮಲ ಬೆಟ್ಟದ 3550 ಮೆಟ್ಟಿಲು ಏರಿದ ಕರ್ನಾಟಕದ 116 ವರ್ಷದ ವೃದ್ಧೆ !

ತಿರುಪತಿ : ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ದೇವರ ಮೇಲಿನ ಅಚಲ ಭಕ್ತಿಯಿಂದ ಕರ್ನಾಟಕದ 116 ವರ್ಷದ ವೃದ್ಧೆಯೊಬ್ಬರು ಕಾಲ್ನಡಿಗೆಯಲ್ಲೇ ತಿರುಮಲ ಬೆಟ್ಟ ಏರಿರುವ ವಿದ್ಯಮಾನ ಈಗ ವ್ಯಾಪಕ ಗಮನ ಸೆಳೆದಿದೆ.

ಯಾವುದೇ ಆಯಾಸವಿಲ್ಲದೆ, ಯಾರ ಸಹಾಯವನ್ನೂ ಪಡೆಯದೆ, ಕೈಯಲ್ಲಿ ಕೇವಲ ಒಂದು ಕೋಲನ್ನು ಆಧಾರವಾಗಿಸಿಕೊಂಡು, ಸುಮಾರು 3,550 ಮೆಟ್ಟಿಲುಗಳನ್ನು ಏರಿ ತಿರುಮಲ ತಲುಪಿರುವುದು ಆಶ್ಚರ್ಯಚಕಿತರನ್ನಾಗಿಸಿದೆ. ಈ ವೃದ್ಧೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕರ್ನಾಟಕದ ಲಕ್ಷ್ಮವ್ವ ಎಂಬ ಶತಾಯುಷಿ ವೃದ್ಧೆಯ ವಯಸ್ಸು ಕುಟುಂಬ ಸದಸ್ಯರ ಮಾಹಿತಿ ಪ್ರಕಾರ 116 ವರ್ಷಗಳಾಗಿವೆ. ಈ ವಯಸ್ಸಿನಲ್ಲಿಯೂ ಅವರು ತೋರಿದ ಮನೋಬಲ, ಅಚಲ ಭಕ್ತಿ ಹಾಗೂ ಆತ್ಮವಿಶ್ವಾಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತಮ್ಮ ಅತ್ಯಂತ ವೃದ್ಧಾಪ್ಯದಲ್ಲಿಯೂ ತಿರುಪತಿ ವೆಂಕಟೇಶ್ವರ ಸ್ವಾಮಿ ಮೇಲಿನ ಅಚಲ ಭಕ್ತಿಯಿಂದ ಪ್ರೇರಿತರಾದ ಅವರು, ಕುಟುಂಬ ಸದಸ್ಯರ ಜೊತೆಗೆ ಶೇಷಾಚಲ ಬೆಟ್ಟಗಳ ಮೂಲಕ ಸುಮಾರು 9 ಕಿ.ಮೀ. ದೂರದ, 3,550 ಮೆಟ್ಟಿಲುಗಳಿರುವ ಅಲಿಪಿರಿ ಕಾಲುದಾರಿ ಮಾರ್ಗವನ್ನೇ ಆಯ್ಕೆ ಮಾಡಿಕೊಂಡು ಯಶಸ್ವಿಯಾಗಿ ಏರಿದರು.
ಶ್ರೀ ವೆಂಕಟೇಶ್ವರ ಸ್ವಾಮಿಯ ನಾಮಸ್ಮರಣೆ ಮಾಡುತ್ತಾ ಒಂದೊಂದೇ ಮೆಟ್ಟಿಲು ಏರಿ ತಿರುಮಲ ತಲುಪಿದರು. ಈ ಅಪರೂಪದ ದೃಶ್ಯವನ್ನು ಭಕ್ತರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ.

ಈ ಘಟನೆ ಕಂಡ ಅನೇಕ ಭಕ್ತರು, ಇಂತಹ ವಯಸ್ಸಿನಲ್ಲಿಯೂ ಅವರಿಗೆ ದೊರೆತಿರುವ ದೈಹಿಕ ಹಾಗೂ ಮಾನಸಿಕ ಶಕ್ತಿಗೆ ಶ್ರೀ ವೆಂಕಟೇಶ್ವರ ಸ್ವಾಮಿಯವರ ಕೃಪೆ ಕಾರಣ ಎಂದು ಹೇಳಿದರೆ ಇನ್ನೂ ಕೆಲವರು ಅವರ ಆರೋಗ್ಯಕರ ಜೀವನಶೈಲಿ, ಅಚಲ ಸಂಕಲ್ಪ, ದೃಢ ಮನೋಬಲ ಮತ್ತು ಆತ್ಮವಿಶ್ವಾಸವೇ ಈ ಸಾಧನೆಯ ಹಿಂದಿನ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಭಕ್ತಿ, ಪರಿಶ್ರಮ ಹಾಗೂ ಛಲವನ್ನು ಕಣ್ಣಾರೆ ಕಂಡ ಸಹಯಾತ್ರಿಕರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, 116 ವರ್ಷದ ವಯಸ್ಸಿನಲ್ಲಿ ಅಲಿಪಿರಿ ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ತಿರುಮಲ ತಲುಪಿದ ಲಕ್ಷ್ಮವ್ವ ಅವರ ಭಕ್ತಿಯಾತ್ರೆ ಇಂದು ಸಾವಿರಾರು ಮಂದಿಗೆ ಪ್ರೇರಣೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!