ಬೆಳಗಾವಿ : ನೈರುತ್ಯ ರೈಲ್ವೆಯು
‘ಮೈಸೂರು-ಬೆಳಗಾವಿ-ಮೈಸೂರು ವಿಶ್ವಮಾನವ ಸೂಪರ್ಫಾಸ್ಟ್ ಎಕ್ಸ್ಪ್ರೆಸ್’ (ರೈಲು ಸಂಖ್ಯೆ 20676/20675) ರೈಲಿನ ಹಳೆಯ ಐಸಿಎಫ್ ಬೋಗಿಗಳನ್ನು ಆಧುನಿಕ ಎಲ್ಎಚ್ಬಿ ಬೋಗಿಗಳಾಗಿ ಬದಲಾಯಿಸುತ್ತಿದೆ.
ಈ ಪರಿಷ್ಕೃತ ವ್ಯವಸ್ಥೆಯು ಮೈಸೂರಿನಿಂದ ಏ.26ರಿಂದ ಮತ್ತು ಬೆಳಗಾವಿಯಿಂದ ಏ.27ರಂದು ಜಾರಿಗೆ ಬರಲಿದೆ.
ಪ್ರಸ್ತುತ 21 ಬೋಗಿಗಳನ್ನು ಹೊಂದಿರುವ ಈ ರೈಲು, ಇನ್ಮುಂದೆ ಒಟ್ಟು 20 ಎಲ್ಎಚ್ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಇದರಲ್ಲಿ 1 ಎಸಿ ಚೇರ್ಕಾರ್, 12 ಸಾಮಾನ್ಯ ದರ್ಜೆ ಬೋಗಿಗಳು, 5 ದ್ವಿತೀಯ ದರ್ಜೆ ಸಿಟಿಂಗ್ ಚೇರ್ಕಾರ್ ಬೋಗಿಗಳು, 1 ಜನರೇಟರ್ ಕಾರ್ ಹಾಗೂ 1 ಅಂಗವಿಕಲ ಸ್ನೇಹಿ ಕಂಪಾರ್ಟ್ಮೆಂಟ್ ಒಳಗೊಂಡ ಬ್ರೇಕ್ ವ್ಯಾನ್ ಇರಲಿವೆ. ಈ ಹೊಸ ಎಲ್ಎಚ್ಬಿ ಬೋಗಿಗಳು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ, ಉತ್ತಮ ಸೌಕರ್ಯ ಮತ್ತು ಸುಧಾರಿತ ಸೌಲಭ್ಯಗಳನ್ನು ಒದಗಿಸಲಿವೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.


