ಸಾಮೂಹಿಕ ವಿವಾಹ ಏರ್ಪಡಿಸುವ ಮೂಲಕ ತನ್ನ ನೂತನ ಎಸ್.ಎಸ್.ಕನ್ವೆನ್ಶನ್ ಹಾಲ್ ಉದ್ಘಾಟನೆಗೆ ಡಿಕೆ ಮೋಟಿವ್ ಸಂಸ್ಥೆ ಅಡಿ ಇಟ್ಟಿದೆ.
ಬೆಳಗಾವಿ :ಪತ್ರಕರ್ತ ದಿಲೀಪ ಕುರಂದವಾಡೆ ಅವರು ಹುಕ್ಕೇರಿ ಪಟ್ಟಣದಲ್ಲಿ ತಮ್ಮ ತಂದೆ – ತಾಯಿ ಹೆಸರಿನಲ್ಲಿ ನೂತನವಾಗಿ ನಿರ್ಮಿಸಿದ ಕಲ್ಯಾಣ ಮಂಟಪ (ಎಸ್.ಎಸ್. ಕನ್ವೆನ್ಶನಲ್ ಹಾಲ್) ಉದ್ಘಾಟನಾ ಸಮಾರಂಭ ಡಿ.4 ರಂದು ಹಮ್ಮಿಕೊಳ್ಳಲಾಗಿದೆ.
ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸುವ ಮೂಲಕ ನಮ್ಮ ಕನಸಿನ ಕಲ್ಯಾಣ ಮಂಟಪ ಉದ್ಘಾಟಿಸಲು ನಿರ್ಧರಿಸಿದ್ದೇವೆ. ಈ ಶುಭ ಘಳಿಗೆಯಲ್ಲಿ ತಾವು ಉಪಸ್ಥಿತರಿದ್ದು ನವ ವಧು- ವರರಿಗೆ ಆಶೀರ್ವದಿಸಿ ಶುಭ ಹಾರೈಸುವಂತೆ ಪತ್ರಕರ್ತ ದಿಲೀಪ ಕುರಂದವಾಡೆ ಮನವಿ ಮಾಡಿದ್ದಾರೆ.