This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಬೆಳಗಾವಿಯಲ್ಲಿ ಕಳ್ಳತನ ಮಾಡಿ ರಾಜಸ್ಥಾನದಲ್ಲಿ ಅಡಗಿದ್ದ ಉತ್ತರ ಪ್ರದೇಶ ಕೆಲಸಗಾರರ ಬಂಧನ Arrest of Uttar Pradesh workers who were hiding in Rajasthan after stealing in Belgaum


 

ಬೆಳಗಾವಿ :
ಅಕ್ಟೋಬರ್ 13 ರಂದು ಬೆಳಗಾವಿ ನಗರದ ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಭಾಗವಾನ ಗಲ್ಲಿಯ ಸದ್ರುದ್ದೀನ್ ಚೌದಲಿ ಇವರ
ಕಿರಣ ಹೋಲ್ ಸೇಲ್ ಅಂಗಡಿಯಲ್ಲಿದ್ದ 4,00,೦೦೦ -ರೂ ಹಣವನ್ನು ಅಂಗಡಿಯಲ್ಲಿದ್ದ ಉತ್ತರಪ್ರದೇಶದ ಮೂರು ಜನ ಕೆಲಸಗಾರರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಾರ್ಕೇಟ್ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎನ್. ಬಿ. ಬರಮನಿ , ಎಸಿಪಿ , ಮಾರ್ಕೇಟ್ ಉಪವಿಭಾಗ ಬೆಳಗಾವಿ ನಗರ ರವರ ನೇತೃತ್ವದಲ್ಲಿ ಮಲ್ಲಿಕಾರ್ಜುನ ತುಳಸಿಗೇಲಿ , ಪಿಐ , ಹುಸೇನ ಕೆರೂರ , ಪಿ.ಎಸ್.ಐ, ಶಶಿಕುಮಾರ ಕುರಳ ಪಿ.ಎಸ್.ಐ ಹಾಗೂ ಲಕ್ಷಣ ಎಸ್ ಕಡೋಲ್ಕರ ಸಿಎಚ್‌ , ಶಂಕರ ಕುಗಳೊಳ್ಳಿ ಸಿಪಿಸಿ , ಖಾದರಸಾಬ ಖಾನಮ್ಮನವರ ಸಿಪಿಸಿ ರವರ ತಂಡ ಸದರ ಪ್ರಕರಣದಲ್ಲಿಯ ಆರೋಪಿತರ ಬಗ್ಗೆ ಸೂಕ್ತ ಮಾಹಿತಿ ಕಲೆ ಹಾಕಿ ರಾಜಸ್ಥಾನ ರಾಜ್ಯದಲ್ಲಿ ರಾಜಸ್ಥಾನ ಪೊಲೀಸರ ಸಹಕಾರದಿಂದ ಆರೋಪಿತರನ್ನು ಪತ್ತೆ ಮಾಡಿ ಕಳ್ಳತನವಾದ 4,00,000 ರೂ. ಹಣವನ್ನು ವಶಪಡಿಸಿಕೊಂಡು 19-10-2022 ರಂದು ಆರೋಪಿತರನ್ನು ನ್ಯಾಯಾಲಯಲಕ್ಕೆ ಹಾಜರುಪಡಿಸಿದ್ದಾರೆ.

ಮಾರ್ಕೇಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯದಕ್ಷತೆಯನ್ನು ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರು ರವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.


Jana Jeevala
the authorJana Jeevala

Leave a Reply