ಬೆಂಗಳೂರು :
ಕರ್ನಾಟಕ ವಿಧಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಕಟ್ಟುನಿಟ್ಟಿನ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ವಾಟ್ಸಪ್ ಗ್ರೂಪ್ ಅಥವಾ ಟ್ರೋಲ್ ಪೇಜ್ ಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೆ ಕ್ರಮ ಜರುಗಿಸಲಾಗುತ್ತದೆ ಎಂದು ಬಿಬಿಎಂಪಿ ಚುನಾವಣಾ ವಿಭಾಗದ ಆಯುಕ್ತ ಉಜ್ವಲ್ ಕುಮಾರ್ ಎಚ್ಚರಿಕೆ ನೀಡಿ ನೀಡಿದ್ದಾರೆ.
ವಾಟ್ಸಪ್ ಟ್ರೋಲ್ ಪೇಜ್ ಗಳ ಮೇಲೆ ಆಯೋಗ ನಿಗಾ ವಹಿಸಿದೆ. ಜಾಹೀರಾತು ನೀಡಬೇಕಾದರೆ ಪೂರ್ವಾನುಮತಿ ಪಡೆಯಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಯಾರಾದರೂ ದೂರು ನೀಡಬಹುದು ಎಂದು ಅವರು ತಿಳಿಸಿದ್ದಾರೆ.