This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ದೇವ ಮಾನವ God is human


 

ಭುವಿಯಲಿ ನೆಲೆಸಿಹ ದೇವ ಮಾನವ
ಶ್ವೇತ ವಸ್ತ್ರದಾ ಸರಳತೆಯ ಜೀವ
ಹಾಲು ಮನದ ಶಾಂತ ಮೂರ್ತಿ ಇವ
ಸರಳ ಜೀವನದ ಸಿದ್ದೇಶ್ವರ ಅಪ್ಪನಿವ

ಅಪ್ಪನವರ ವಾಣಿ ಕೇಳಿದವ ಪುಣ್ಯವಂತ
ದರುಶನ ಪಡೆದವನು ನಿಜ ಭಾಗ್ಯವಂತ
ನಿಜ ದೇವರನು ಕಂಡರವರು ಯಾರಿಹರು
ಇವರೇ ನೋಡಿರಿ ನಡೆದಾಡುವ ದೇವರು

ಜೀವನದ ಅರ್ಥವನು ಸಾರುವಾ ತ್ಯಾಗಿಯು
ತತ್ವ ಜ್ಞಾನವನು ಬಿತ್ತುವಾ ಯೋಗಿಯು
ಅಪ್ಪನವರ ವಾಣಿ ಅರಿತವರಿಗಿಲ್ಲ ನೋವು
ಜೀವನದಿ ತುಂಬಲಿದೆ ನಲಿವು ಗೆಲುವು

ಮುಗಿಲೆತ್ತರದ ಜ್ಞಾನ ನಿಮ್ಮದು ದೇವ
ಸಾಗರದಾಚೆಯಲೂ ಮಾಡುವರು ನಿನ್ನ ಸ್ತವ
ಶಿರಸಾಷ್ಟಾಂಗ ವಂದನೆಗಳು ನಿಮಗೇ ತಂದೆ
ನಿಮ್ಮ ಅಭಯ ಹಸ್ತ ಎಮಗೆ ನೀಡಿರೆಂದೆ

ವರ್ಣಿಸಲು ಪದಗಳಿಗೆ ಸಿಗದ ವ್ಯಕ್ತಿತ್ವ
ಮೌನದಲಿ ನಿಂತಿರುವೆ ನಿಮ್ಮ ನೋಡುತ್ತ
ಪೂಜ್ಯ ಪಾದಕಮಲಗಳಿಗೆ ಸದಾ ನಮಿಸುತ್ತ
ಜೀವನದಿ ಪಾಲಿಸುವೆ ನಿಮ್ಮ ವಾಣಿಗಳ ತತ್ವ

ರಚನೆ ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ ಆರ್ ಪಿ ಚನ್ನಮ್ಮನ ಕಿತ್ತೂರು


Jana Jeevala
the authorJana Jeevala

Leave a Reply