ಬೆಂಗಳೂರು: ಕರ್ನಾಟಕದ 2025-26ನೇ ಸಾಲಿನ ಎಸ್ಎಸ್ಎಲ್ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು. ಶೇ..94.1 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಏಳು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ದಾವಣಗೆರೆಯ ಭರತ, ರಾಯಚೂರಿನ ಸುಖದೇವ, ಚಿಕ್ಕೋಡಿಯ ಪ್ರಾರ್ಥನಾ, ಚಿಕ್ಕಮಗಳೂರಿನ ಬೃಂದಾ, ಉಡುಪಿಯ ಪ್ರೀತಂ, ವಿಜಯಪುರದ ಸೌಜನ್ಯ, ಬೆಂಗಳೂರು ಉತ್ತರದ ಧನುಷ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮಾರ್ಚ್ 18 ರಿಂದ ಏಪ್ರಿಲ್ 2ರ ವರೆಗೆ ನಡೆದಿದ್ದ ಈ ಪರೀಕ್ಷೆಯಲ್ಲಿ ರಾಜ್ಯಾದ್ಯಂತ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆ ಮಾಡಿದ್ದಾರೆ.
7,24, 794 ಮಕ್ಕಳು ಪಾಸ್ ಆಗಿದ್ದಾರೆ. . ಶೇ 96.18ರಷ್ಟು ಬಾಲಕಿಯರು, ಶೇ 91.94ರಷ್ಟು ಬಾಲಕರು ಪಾಸಾಗಿದ್ದಾರೆ. 3,92,922 ಬಾಲಕಿಯರ ಪೈಕಿ 3,77,922 ಬಾಲಕಿಯರು ತೇರ್ಗಡೆಯಾಗಿದ್ದಾರೆ. 3,77,287 ಬಾಲಕರ ಪೈಕಿ 3,46,872 ಬಾಲಕರು ತೇರ್ಗಡೆ ಹೊಂದಿದ್ದಾರೆ.
ಏಳು ಮಂದಿ ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ಸುಖದೇವ್ 625ರಲ್ಲಿ 625 ಅಂಕ ಪಡೆದವರಾಗಿದ್ದಾರೆ. 7 ಲಕ್ಷದ 24 ಸಾವಿರದ 794 ಮಕ್ಕಳು ಪಾಸ್ ಆಗಿದ್ದಾರೆ.
karresults.nic.in ಅಥವಾ kseab.karnataka.gov.in ಈ ಎರಡು ವೆಬ್ಸೈಟ್ಗಳಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಅಲ್ಲದೇ, ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗಳಿಗೂ ಎಸ್ಎಂಎಸ್ (SMS) ಮೂಲಕ ಫಲಿತಾಂಶ ಕಳುಹಿಸಲು ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿದೆ.
ಈ ವರ್ಷ ಮಂಡಳಿಯು ಈ ಬಾರಿ ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿಯನ್ನು ಫಲಿತಾಂಶ ಪ್ರಕಟವಾದ ತಕ್ಷಣವೇ ‘ಡಿಜಿಲಾಕರ್’ನಲ್ಲಿ ಲಭ್ಯವಾಗುವಂತೆ ಮಾಡಿದೆ. ವಿದ್ಯಾರ್ಥಿಗಳು ಇದೀಗ https://www.digilocker.gov.in ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು
ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 98.40ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಶೇ 98.18 ರ ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ 3ನೇ ಸ್ಥಾನ (ಶೇ 98.09), ಹಾಸನ 4ನೇ ಸ್ಥಾನ (ಶೇ 97.51) ಗಳಿಸಿವೆ.
ಉಳಿದಂತೆ ಮಂಡ್ಯ 5ನೇ ಸ್ಥಾನ (ಶೇ 97.45), ಶಿರಸಿ 6ನೇ ಸ್ಥಾನ (ಶೇ 97.21), ಹಾವೇರಿ 7ನೇ ಸ್ಥಾನ (ಶೇ 96.87), ಕೊಡಗು 8ನೇ ಸ್ಥಾನ (ಶೇ 96.70), ಶಿವಮೊಗ್ಗ 9ನೇ ಸ್ಥಾನ (ಶೇ 96.56), ವಿಜಯನಗರ 10ನೇ ಸ್ಥಾನ (ಶೇ 96.39), ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ (ಶೇ 95.84), ಧಾರವಾಡ 12ನೇ ಸ್ಥಾನ (ಶೇ 95.59), ಕೋಲಾರ 13ನೇ ಸ್ಥಾನ (ಶೇ 95.50) ಗಳಿಸಿವೆ.
ಬಾಗಲಕೋಟೆ 14ನೇ ಸ್ಥಾನ – 95.42%, ಬೆಂ.ಉತ್ತರ 15ನೇ ಸ್ಥಾನ – 95.34%, ಗದಗ 16ನೇ ಸ್ಥಾನ – 95.24%, ಚಿಕ್ಕಮಗಳೂರು 17ನೇ ಸ್ಥಾನ – 94.99%, ಬೆಳಗಾವಿ 18ನೇ ಸ್ಥಾನ – 94.75%, ದಾವಣಗೆರೆ 19ನೇ ಸ್ಥಾನ – 94.64%, ಮೈಸೂರು 20ನೇ ಸ್ಥಾನ – 94.50%, ರಾಯಚೂರು 21ನೇ ಸ್ಥಾನ – 94.41%, ವಿಜಯಪುರ 22ನೇ ಸ್ಥಾನ – 94.17%, ಚಿಕ್ಕೋಡಿ 23ನೇ ಸ್ಥಾನ – 94.09%,
ಬಳ್ಳಾರಿ 24ನೇ ಸ್ಥಾನ – 93.36%, ಕೊಪ್ಪಳ 25ನೇ ಸ್ಥಾನ – ಶೇ.93.10, ರಾಮನಗರ 26ನೇ ಸ್ಥಾನ – 92.83%, ಚಿತ್ರದುರ್ಗ 27ನೇ ಸ್ಥಾನ – 92.25%, ಬೀದರ 28ನೇ ಸ್ಥಾನ – 92.18%, ತುಮಕೂರು 29ನೇ ಸ್ಥಾನ – 92.04%, ಚಾಮರಾಜನಗರ 30ನೇ ಸ್ಥಾನ – 91.89%, ಯಾದಗಿರಿ 31ನೇ ಸ್ಥಾನ – 91.89%
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ಪೋರ್ಟಲ್ https://karresults.nic.in ಮೂಲಕವೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಹಾಗೇಯೇ ‘KarnatakaOne’ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ಪರಿಶೀಲಿಸಿಕೊಳ್ಳಬಹುದು. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಮಂಡಳಿ ವತಿಯಿಂದಲೇ ನೇರವಾಗಿ ಫಲಿತಾಂಶದ ವಿವರಗಳು ಎಸ್ಎಂಎಸ್ ಅಥವಾ ವಾಟ್ಸಾಪ್ ಮೂಲಕ ರವಾನೆಯಾಗುತ್ತಿದೆ.


