ಸಂಕೇಶ್ವರ : ಪಟ್ಟಣದ ಹೊರ ವಲಯದಲ್ಲಿರುವ ಹಿರಣ್ಯಕೇಶಿ ನದಿ ನೀರಲ್ಲಿ ಮುಳುಗಿ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ವರದೆ.
ಮೃತಪಟ್ಟವರನ್ನು ಸಂಕೇಶ್ವರ ಪಟ್ಟಣದ ಹನುಮಾನ ನಗರ ಕುಟೋಳಿ ಕುಟುಂಬದವರೆಂದು ತಿಳಿದು ಬಂದಿದೆ. ಆದರೆ ಯಾವ ಕಾರಣದಿಂದ ಇವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಮೃತರ ಹೆಸರು ತಿಳಿದು ಬಂದಿಲ್ಲ.
ಮಂಗಳವಾರ ರಾತ್ರಿ ಸಂಕೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತಾಯಿಯ ಶವವನ್ನು ನದಿ ನೀರಿನಿಂದ ಮೇಲಕ್ಕೆ ತೆಗೆದಿದ್ದಾರೆ. ಆದರೆ ಮಗನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


