ಬೆಳಗಾವಿ: ನೈಟಿ ಹಾಕುವ ವಿಷಯವಾಗಿ ನಡೆದ ತಂಟೆಯಲ್ಲಿ ಪತಿ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಖಾನಾಪುರ ತಾಲೂಕು ಹತ್ತರವಾಡ ಗ್ರಾಮದ ಕೃಷ್ಣಾಜಿ ಪರಶುರಾಮ ಪಾಟೀಲನನ್ನು ಬಂಧನ ಮಾಡಲಾಗಿದೆ ಎಂದು ಎಸ್ಪಿ ರಾಮರಾಜನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎಂಟು ವರ್ಷಗಳ ಹಿಂದೆ ಇವರ ಮದುವೆಯಾಗಿದ್ದು ಅಂದಿನಿಂದ ಆತ ಕಿರುಕುಳ ನೀಡುತ್ತಿದ್ದ. ಏ. 19 ರಂದು ಮನೆಯಲ್ಲಿ ಇಬ್ಬರ ನಡುವೆ ತಂಟೆ ನಡೆದಿತ್ತು. ಗೌನ್ ಕಾಡಾ..ನಹೀ ತರ ತುಲಾ ಸೋಡನಾರ ನಹೀ…ಎಂದು ಮರಾಠಿಯಲ್ಲಿ ಪತ್ನಿಗೆ ಬೈದು ಬೆಂಕಿಕಡ್ಡಿಯಿಂದ ಗೀರಿ ಕೊಲೆಗೆ ಯತ್ನಿಸಿದ್ದ. ಗಾಯಗೊಂಡ ಮಹಿಳೆಯನ್ನುಮೊದಲು ಬೆಳಗಾವಿ ಬಿಮ್ಸ್, ನಂತರ ಗೋವಾ ಬಾಂಬೋಲಿಯಂ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ತಲೆಮರೆಸಿಕೊಂಡಿದ್ದ ಪತಿಯನ್ನು ಪತ್ತೆ ಮಾಡಿ ವಿಚಾರಣೆಗೊಳಪಡಿಸಿದಾಗ ಕೊಲೆಯ ಕೃತ್ಯ ಬಯಲಾಗಿದೆ ಎಂದು ಮಾಹಿತಿ ನೀಡಿದರು.


