ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ (Karnataka SSLC Result 2026) ಗುರುವಾರ (ಏ.23) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.
ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳು ಫಲಿತಾಂಶವನ್ನು https://karresults.nic.in/ ಮತ್ತು ಕರ್ನಾಟಕ ಒನ್ ಆ್ಯಪ್ (KarnatakaOne Mobile App) ಮೂಲಕ ನೋಡಬಹುದಾಗಿದೆ. ಹಾಗೂ ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್/ಎಸ್ಎಂಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿಯನ್ನು ರವಾನಿಸಲಾಗುತ್ತದೆ.
ಈ ವರ್ಷ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಏಪ್ರಿಲ್ 23 ರಂದು ಮಧ್ಯಾಹ್ನ 12 ಗಂಟೆಗೆ ಡಿಜಿಲಾಕರ್ https://www.digilocker.gov.in/ ಮೂಲಕ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಅಂಕಪಟ್ಟಿಯನ್ನು ಡಿಜಿಲಾಕರ್ನಿಂದ ಡೌನ್ಲೋಡ್ ಮಾಡಿಕೊಳ್ಳವ ಪ್ರಕ್ರಿಯೆಯನ್ನು ಈ Video link https://www.youtube.com/shorts/mu-B4tBwaf8 ಬಳಸಿ ತಿಳಿದುಕೊಳ್ಳಬಹುದು. ಫಲಿತಾಂಶ ಪಟ್ಟಿಯು ಸಂಬಂಧಿತ ಶಾಲೆಗಳಿಗೆ ಏಪ್ರಿಲ್ 23 ಮಧ್ಯಾಹ್ನ 12 ಗಂಟೆಗೆ ಲಭ್ಯವಾಗಲಿದೆ ಎಂದು ಪರೀಕ್ಷಾ ಮಂಡಲಿ ತಿಳಿಸಿದೆ.
ಪರೀಕ್ಷೆ ಫಲಿತಾಂಶ ನೋಡುವುದು ಹೇಗೆ?
ಮೊದಲು ವೆಬ್ಸೈಟ್ karresults.nic.in ಗೆ ಭೇಟಿ ಕೊಡಬೇಕು.
ವೆಬ್ಸೈಟ್ ಪರದೆ ಮೇಲೆ ಕಾಣುವ SSLC Result 2026 ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
ಬಳಿಕ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ಮಾಹಿತಿ ನಮೂದಿಸಬೇಕು
ವಿವರ ಹಾಕಿದ ಬಳಿಕ ಸಲ್ಲಿಸು/ಸಮ್ಮಿಟ್ ಬಟನ್ ಒತ್ತಬೇಕು
ಪರದೆ ಮೇಲೆ ಅಂಕಪಟ್ಟಿ ಕಾಣಿಸುತ್ತದೆ
ಅದು ನಿಮ್ಮ ಅಂಕಪಟ್ಟಿಯೇ ಎಂದು ಪರಿಶೀಲಿಸಿಕೊಂಡು ಡೌನ್ಲೋಡ್ ಮಾಡಿಕೊಳ್ಳಬಹುದು.
ಡಿಜಿಲಾಕರ್ ಮತ್ತು ಕರ್ನಾಟಕ ಒನ್ ಅಪ್ಲಿಕೇಶನ್ನಲ್ಲೂ ಸಹ KSEAB 10 ನೇ ತರಗತಿ ಅಂಕಪಟ್ಟಿ 2026 ದೊರೆಯಲಿದೆ. ಆಪ್ಗಳನ್ನು ಪ್ಲೆಸ್ಟೋರ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿ ನಮೂದಿಸಿ ನೀವು ಅಲ್ಲಿ ಸಹ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.