ಬೆಳಗಾವಿ : ಯಮಕನಮರಡಿ ಪೊಲೀಸ್ ಠಾಣೆಯ
ವ್ಯಾಪ್ತಿಯಲ್ಲಿ ವರದಿಯಾಗುತ್ತಿದ್ದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ವರಿಷ್ಠಾಧಿಕಾರಿಯವರು ವಿಶೇಷ ತಂಡವನ್ನು ರಚಿಸಿ ಕಳ್ಳತನದ ಜಾಲ ಪತ್ತೆ ಮಾಡಲು ಪೋಲಿಸರು ಜಾಲ ಬೀಸಿದ್ದರು.
ಈ ಜಾಲದಲ್ಲಿ ಹಳೆಯ ಕುಖ್ಯಾತ ಹಳೆ ಅಪರಾಧಿಯನ್ನು ಪೊಲೀಸರು ಸಂಶಯಾಸ್ಪದದಿಂದ ನರಸಿಂಗಪುರ ಗ್ರಾಮದ ಅಂಡರ ಬ್ರಿಜ್ ಹತ್ತಿರ ಗಂಗವ್ವಾ ಕೊಡದವರ ಎಂಬುವವರ ಪ್ಲಾಟಿನಾ ಮೋಟರ್ ಸೈಕಲ್ ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ತನಿಖೆಗಾಗಿ ಯಮಕನಮರಡಿ ಠಾಣೆ ಸಿಪಿಐ ಜೆ.ಎಫ್.ಮುಶಾಪುರಿ, ಹಾಗೂ ಬಿ.ಕೆ.ಪಾಟೀಲ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಜೆ.ಬಿ.ನಾಗನ್ನವರ, ಪಿ.ಕೆ.ಕಿಳ್ಳಿಕೇತರ ಅವರ ವಿಶೇಷ ತನಿಖಾ ತಂಡ ರಚಿಸಿ ಬೆನಕನಹೊಳಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯಾದ ಬೆನಕನಹೊಳಿಯ ಗ್ರಾಮದ ಸಂಜು ಸಂಜ್ಯಾ ಮಲ್ಲಪ್ಪ ಮೇಕಳಿ (25) ಎಂಬುವವನನ್ನು ಬಂಧಿಸಿದರು. ಬೆಳಗಾವಿ ಜಿಲ್ಲೆ ಮತ್ತು ವಿವಿಧ ರಾಜ್ಯಗಳಲ್ಲಿ ಆರೋಪಿ ಕಳ್ಳತನ ಮಾಡಿದ್ದ ಸುಮಾರು 8 ಮೋಟಾರ್ ಸೈಕಲುಗಳನ್ನು ವಶಪಡಿಸಿಕೊಳ್ಳಲಾಗಿದೆ.


