ಬೆಳಗಾವಿ : ಸುಳಗಾ ಗ್ರಾಮದ ದೇಶಪಾಂಡೆ ಗಲ್ಲಿಯಲ್ಲಿ ಇಬ್ಬರು ತಮ್ಮ ಮನೆಯಲ್ಲಿ ಮಾದಕ ವಸ್ತುವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿಯನ್ನು ಆಧರಿಸಿ, ಸಿಸಿಬಿ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ನಾಯಕ ಮಾರ್ಗದರ್ಶನದಲ್ಲಿ PSI ಮಂಜುನಾಥ ಭಜಂತ್ರಿ ಹಾಗೂ ಅವರ ತಂಡವು ಪೊಲೀಸ್ ಶ್ವಾನದಳ ವಿಭಾಗದ ಚಾಣಾಕ್ಷ ಶ್ವಾನ-ಅಧಿತಿ ಯೊಂದಿಗೆ ಆರೋಪಿಗಳ ಮನೆಯ ಮೇಲೆ ದಾಳಿ ಮಾಡಿ ಆರೋಪಿಗಳಾದ
ನಾಗೇಶ ಮಧುಕಂ ಭಗತ (35), ಸಾ|| ಸಾವಂತವಾಡಿ ಹಾಲಿ ದೇಶಪಾಂಡೆ ಗಲ್ಲಿ, ಸುಳಗಾ,
ರಾಹುಲ ಜ್ಯೋತಿಬಾ ಜಾಧವ (33) ಸಾ|| ಕಂಗ್ರಾಳಿ ಕೆ.ಎಚ್. ಹಾಲಿ ದೇಶಪಾಂಡೆ ಗಲ್ಲಿ, ಸುಳಗಾ ಈ ಇಬ್ಬರನ್ನು
ವಶಕ್ಕೆ ಪಡೆದುಕೊಂಡು ಶ್ವಾನ-ಅಧಿತಿ ಯಿಂದ ಪರಿಶೀಲನೆಗೊಳಪಡಿಸಿ ಆರೋಪಿಗಳು ತಮ್ಮ ತಲೆದಿಂಬಿನಲ್ಲಿ ಬಚ್ಚಿಟ್ಟಿದ ಸುಮಾರು ರೂ.2,60,000/- ಮೌಲ್ಯದ 12.92 ಗ್ರಾಂ ನಷ್ಟು (119 ಚೀಟಿಗಳು) ಹೆರಾಯಿನ್ ಎಂಬ ಮಾದಕ ವಸ್ತು, 02 ಮೊಬೈಲ್ ಸಿಕ್ಕಿದ್ದು, ಈ ಇಬ್ಬರು ಆರೋಪಿಗಳು ಆರೋಪಿ ನಂ.3 ಸಂತೋಷ ಮುಂಬಯಿ ಕೋಳಿವಾಡಾದ ನಿವಾಸಿ ಈತನಿಂದ ಮಾದಕ ವಸ್ತುವನ್ನು ತಂದು ಮಾರಾಟ ಮಾಡುತ್ತಿದ್ದಾಗಿ ತಿಳಿದು ಬಂದಿದೆ.
ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು ವಿರುದ್ಧ ಕಾಕತಿ ಪೊಲೀಸ್ ಠಾಣೆ ಪ್ರ ಸಂ. 95/2026 ಕಲಂ. 21(ಬಿ), 8(ಸಿ) ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.


