ದೆಹಲಿ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ ಫೈನಲ್ ನಲ್ಲಿ ಬೌಂಡರಿ ಲೈನ್ ನಲ್ಲಿದ್ದ ಸೂರ್ಯಕುಮಾರ್ ಯಾದವ್ ಹಿಡಿದ ಅತ್ಯುತ್ತಮ ಕ್ಯಾಚ್ ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿತು.
ಭಾರತೀಯ ಇತಿಹಾಸ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಸ್ಮರಣೀಯ ಕ್ಯಾಚ್ ಆಗಿ ಪುಟ ಸೇರಲಿದೆ. ಇದೇ ಕ್ಯಾಚಿನಿಂದ ಭಾರತ ತಂಡ ಗೆಲುವು ಸಾಧಿಸಿದೆ. 19ನೇ ಓವರ್ ನಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರು ಸಿಕ್ಸರ್ ಬಾರಿಸಲು ಮುಂದಾಗಿದ್ದರು. ಆದರೆ, ಸಿಕ್ಸರ್ ಹೋಗುತ್ತಿದ್ದ ಬಾಲನ್ನು ತಡೆದ ಸೂರ್ಯ ಕುಮಾರ್ ಯಾದವ್ ಅವರು ಹಿಡಿದ ಅತ್ಯುತ್ತಮ ಕ್ಯಾಚ್ ನಿಂದ ಮಿಲ್ಲರ್ ಔಟಾದರು. ಸೂರ್ಯ ಕುಮಾರ್ ಯಾದವ್ ಅವರು ಬೌಂಡರಿ ಲೈನ್ ನಲ್ಲಿದ್ದ ಬಾಲ್ ಹಿಡಿದು ಮತ್ತೊಮ್ಮೆ ಅದನ್ನು ಎಸೆದು ಹಿಡಿದಿರುವುದು ಅತ್ಯಂತ ಅಮೋಘ ಕ್ಯಾಚ್. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗಿದೆ. ಭಾರತದ ಗೆಲುವಿಗೆ ಸೂರ್ಯಕುಮಾರ್ ಯಾದವ್ ನೇರ ಕಾರಣವಾಗಿದ್ದು ಅವರ ಸಾಧನೆಗೆ ಕ್ರಿಕೆಟ್ ಲೋಕ ಬೆರಗಾಗಿದೆ.