Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಜೈಲು ತಪ್ಪಿಸಿಕೊಳ್ಳಲು ಆಸ್ಪತ್ರೆಯಲ್ಲೇ ಠಿಕಾಣಿ ಹೂಡಿರುವ ಪೊಕ್ಸೋ ಆರೋಪಿ..?

ಜೈಲು ತಪ್ಪಿಸಿಕೊಳ್ಳಲು ಆಸ್ಪತ್ರೆಯಲ್ಲೇ ಠಿಕಾಣಿ ಹೂಡಿರುವ ಪೊಕ್ಸೋ ಆರೋಪಿ..?

ಅಪ್ರಾಪ್ತೆ ಅತ್ಯಾಚಾರಿ ಬಂಧನವಾಗಿ 10 ದಿನಗಳು ಕಳೆದರೂ ಇನ್ನೂ ಜೈಲು ಸೇರದ ಮಣ್ಣಿಕೇರಿ ಕಾಮುಕ..?

ಬೆಳಗಾವಿ : ಮಣ್ಣಿಕೇರಿ ಗ್ರಾಮದ ವಿವಾಹಿತ ಕಾಮುಕನೊಬ್ಬ ಅಪ್ರಾಪ್ತೆಯನ್ನು ಪುಸಲಾಯಿಸಿ ಬಲೆಗೆ ಹಾಕಿಕೊಂಡು ಮಹಾರಾಷ್ಟ್ರ ಹಾಗೂ ಬೇರೆಬೇರೆ ಕಡೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ನಡೆಸಿ ಗರ್ಭಿಣಿ ಮಾಡಿದ್ದಲ್ಲದೆ, ಅಕ್ಟೋಬರ್ 30 ರ ರಾತ್ರಿ ಅವರ ಮನೆಗೆ ನುಗ್ಗಿ ಮತ್ತೊಮ್ಮೆ ಅತ್ಯಾಚಾರಕ್ಕೆ ಯತ್ನಿಸಿ ಮನೆಯವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಘಟನೆ ನಡೆದಿತ್ತು.

ನಂತರ ಈತನನ್ನು ಬಂಧಿಸಿದ್ದ ಕಾಕತಿ ಪೊಲೀಸರು ಜೈಲಿಗೆ ಕಳಿಸುವ ಮುನ್ನ ಈತ ಮಾಡಿದ ನಾಟಕದಿಂದಾಗಿ 10 ದಿನಗಳು ಕಳೆದು ಆಸ್ಪತ್ರೆಯಿಂದ ಡಿಸ್ಚ್ಯಾರ್ಜ್ ಆಗಿ ನಾಲ್ಕು ದಿನಗಳಾದೂ ಈ ಕಾಮುಕ ಮಾತ್ರ ಜೈಲು ಸೇರುತ್ತೇನೆಂದು ಆಸ್ಪತ್ರೆಯಲ್ಲೇ ಕಾಲ ಕಳೆಯುತ್ತಿದ್ದಾನೆ.

ಏನಿದು ಘಟನೆ ..?

ಮಣ್ಣಿಕೇರಿ ಗ್ರಾಮದ ವಿವಾಹಿತ ಮಹೇಶ ಬೆಳಗಾಂವಕರ ಎಂಬಾತನೇ ಅತ್ಯಾಚಾರಿ ಆರೋಪಿ.

ಐದಾರು ತಿಂಗಳ ಹಿಂದೆ ಸಂಬಂಧಿ ಮನೆಯವರ ಬಾಲಕಿಯನ್ನು ಪುಸಲಾಯಿಸಿ ಮಹಾರಾಷ್ಟ್ರ ಹಾಗೂ ಬೇರೆಬೇರೆ ಕಡೆ ಕರೆದೊಯ್ದು ನಿತಂತರವಾಗಿ ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿಯಾಗಿಸಿದ್ದನು. ನಂತರ ಇದರಿಂದ ಹೆದರಿದ ಬಾಲಕಿ ಆತನಿಗೆ ಹಾಗೂ ಮನೆಯಲ್ಲಿ ತಿಳಿಸಿದ್ದಾಳೆ. ಆಗ ಇತ ಮತ್ತೆ ಕಾಮಕ್ಕೆ ಸಹಕರಿಸು ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಬಾಲಕಿ ಒಪ್ಪಿರಲಿಲ್ಲ. ಇಷ್ಟಾದರೂ ಮತ್ತೊಮ್ಮೆ ಮಧ್ಯರಾತ್ರಿ ಅವಳ ಮನೆಗೆ ನುಗ್ಗಿ ಅವಳನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದ. ಈ ಸಮಯದಲ್ಲಿ ತಡೆತಲು ಬಂದ ಪೋಷಕರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದನು.

ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ಬಾಲಕಿ ಪೋಷಕರು ದೂರು ದಾಖಲಿಸಿದ್ದರು.

ತಕ್ಷಣ ಎಚ್ಚೆತ್ತಕೊಂಡ ಕಾಕತಿ ಪೊಲೀಸರು ಪಿಐ ಗುರುನಾಥ ಐ ಎಸ್ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ಹುಲಕುಂದ, ಸಿಬ್ಬಂದಿ ವಿರುಪಾಕ್ಷೀ ಮಾನಗಾವಿ, ಪ್ರಕಾಶ ಬಲ್ಲಾಳ ಇತರರು ಪರಾರಿಯಾಗಿದ್ದ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಕೊಂಡು 2012 ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಮುಂದೆ ನ್ಯಾಯಾಂಗ ವಶಕ್ಕೆ ನೀಡಿ, ವೈದ್ಯಕೀಯ ಪರೀಕ್ಷೆ ನಡೆಸಿ ಜೈಲಿಗಟ್ಟಬೇಕು ಎನ್ನುವಷ್ಟರಲ್ಲಿ ಆರೋಪಿ ಪ್ರಜ್ಞೆ ತಪ್ಪಿ ಬಿದ್ದವರಂತೆ ನಾಟಕ ಮಾಡಿದ್ದಾನೆ. ತಕ್ಷಣ ಇತನನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತನ ಆರೋಗ್ಯ ಸಹಜ ಸ್ಥಿತಿಯಲ್ಲಿದ್ದರೂ, ಇತ ಮಾತ್ರ ನನ್ನನ್ನು ಐಸಿಯುಗೆ ಹಾಕಿ ಎಂದು ಆಸ್ಪತ್ರೆಯವರಿಗೆ ಒತ್ತಾಯಿಸಿದ್ದಾನೆ. ನಂತರ ಮಾರನೆಯ ದಿನ ಇತನ ಆರೋಗ್ಯ ನೋಡಿ ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ. ಈತನ ಆರೋಗ್ಯ ಸ್ಥಿರವಾಗಿದ್ದರೂ ಜೈಲು ಸೇರುತ್ತೇನೆ ಎಂದು ತಿಳಿದು ಆಸ್ಪತ್ರೆ ಬಿಟ್ಟು ಬರುತ್ತಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಡಿಸ್ಚ್ಯಾರ್ಜ್ ಕೊಟ್ಟು ನಾಲ್ಕು ದಿನಗಳಾದರೂ ಆಸ್ಪತ್ರೆ ಬಿಟ್ಟು ಬರದ ಭೂಪ..?

ಆರೋಪಿ ಮಹೇಶ ಆಸ್ಪತ್ರೆ ಸೇರಿ 9 ದಿನಗಳು ಕಳೆದಿವೆ. 8 ದಿನಗಳ ಹಿಂದಷ್ಟೇ ವೈದ್ಯರು ಇತನ ಆರೋಗ್ಯ ನೋಡಿ ಎಲ್ಲವೂ ಸರಿಯಾಗಿದೆ ಎಂದು ಸಾಮಾನ್ಯ ವಾರ್ಡ್ ಗೆ ಶಿಪ್ಟ ಮಾಡಿ ನಾಲ್ಕು ದಿನಗಳ ಹಿಂದೆಯೇ ಈತನನ್ನು ಡಿಸ್ಚ್ಯಾರ್ಜ್ ಮಾಡಿದ್ದಾರೆ. ಆದರೆ ಈ ಕಾಮುಕ ಹಾಗೂ ಕುಟುಂಬದವರು ಸೇರಿಕೊಂಡು ನನಗೆ ಇನ್ನೂ ಹುಶಾರಾಗಿಲ್ಲ. ನಮ್ಮ ಹತ್ತಿರ ದುಡ್ಡಿಲ್ಲ ಎಂದು ನೇಪ ಹೇಳುತ್ತ ಕಾಲು ಕಳೆಯುತ್ತಿದ್ದಾರೆ. ಇದಕ್ಕೆ ಆಸ್ಪತ್ರೆಯವರು ಕೂಡ ಬೇಸತ್ತಿದ್ದಾರೆ. ಇದಲ್ಲದೇ ಇಂತಹ ಕಾಮುಕನ ಕಾವಲಿಗೆ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಸಮಯ ಮತ್ತು ಕರ್ತವ್ಯ ವ್ಯರ್ಥ ಮಾಡಲಾಗುತ್ತಿದೆ ಎಂದು ಅಲ್ಲಿನವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಮೀಷನರ್ ವ್ಯಾಪ್ತಿಯಲ್ಲಿ ಪೊಕ್ಸೋ ಆರೋಪಿಯೊರ್ವ ಈ ರೀತಿ ನಾಟಕ ಮಾಡುತ್ತಿದ್ದರು ಪೊಲೀಸರು ಮಾತ್ರ ಅದನ್ನು ಸುಮ್ಮನೆ ನೋಡುತ್ತ ಕುಳಿತಿದ್ದಾರೆ ಎಂದು ಈತನಿಂದ ಬಲಿ ಪಶುವಾಗಿರುವ ಬಾಲಕಿ ಕುಟುಂಬ ಶಪಿಸುತ್ತಿದ್ದಾರೆ.

ಇನ್ನಾದರೂ ಪೊಲೀಸರು ಆರೋಪಿ ನಾಟಕಕ್ಕೆ ತಿಲಾಂಜಲಿ ಇಟ್ಟು ಜೈಲಿಗಟ್ಟುತ್ತಾರೆ ಎಂದು ಕಾದು ನೋಡುಬೇಕು.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ