ಪತ್ರಕರ್ತ ಉದಯಕುಮಾರ್‌ಗೆ 'ಖಾದ್ರಿ ಶಾಮಣ್ಣ ಪ್ರಶಸ್ತಿ'
ಬೆಂಗಳೂರು: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ನೀಡುವ 'ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ'ಗೆ ಪತ್ರಕರ್ತ ಎನ್.ಉದಯಕುಮಾರ್ ಆಯ್ಕೆಯಾಗಿದ್ದರೆ.
ಈ ಪ್ರಶಸ್ತಿಯು ₹ 15 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಉದಯಕುಮಾರ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಅಂಕಾಲಮಡುಗು ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್‌ಡಬ್ಲ್ಯು ಮತ್ತು ಪತ್ರಿಕೋದ್ಯಮ ಪದವಿ ಪಡೆದ ಅವರು, 1992ರಲ್ಲಿ 'ಪ್ರಜಾವಾಣಿ' ವರದಿಗಾರರಾಗಿ ವೃತ್ತಿ ಆರಂಭಿಸಿದರು.
'ಪ್ರಜಾವಾಣಿ'ಯಲ್ಲಿ ಸಹಾಯಕ ಸಂಪಾದಕ ಹುದ್ದೆಗೆ ತಲುಪುವವರೆಗೆ ವಿವಿಧ ವಿಭಾಗಗಳಲ್ಲಿ 33 ವರ್ಷಗಳು ಕಾರ್ಯನಿರ್ವಹಿಸಿ, 2025ರ ಜೂನ್‌ನಲ್ಲಿ ನಿವೃತ್ತರಾಗಿದ್ದಾರೆ. ಅವರನ್ನು ಈ ವರ್ಷ ಆಯ್ಕೆ ಮಾಡಲಾಗಿದೆ ಟ್ರಸ್ಟ್ ಪರವಾಗಿ ಪತ್ರಕರ್ತ ಎಚ್.ಆರ್. ಶ್ರೀಶ ತಿಳಿಸಿದ್ದಾರೆ.
