ಬೆಳಗಾವಿ : ದೇಶದ ಸ್ವಾತಂತ್ರಕ್ಕಾಗಿ ತ್ಯಾಗ, ಹೋರಾಟ ಮತ್ತು ಬಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸುವ ಜೊತೆಗೆ ದೇಶದ ಅಭಿವೃದ್ಧಿಗೆ ಶ್ರಮಿಸುವುದು ನಿಜವಾದ ದೇಶಪ್ರೇಮವಾಗಿದೆಂದು ಆರ್ ಎಲ್ ಎಸ್ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಪ್ರೊ. ಎಸ್. ಬಿ.ತಾರದಾಳೆ ಹೇಳಿದರು.
ನಗರದ ಕೆ ಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ದಿನಾಂಕ 12/08/2026 ರಂದು ಎನ್ ಎಸ್ ಎಸ್ ಘಟಕದಿಂದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು.
ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡಬೇಕು . ದೇಶ ಬಲಿಷ್ಠ ಗೊಳಿಸುವಲ್ಲಿ ಭಾರತೀಯ ಒಗ್ಗಟ್ಟು ಇರಬೇಕು ಎಂದು ಹೇಳಿದರು.
ಲಿಂಗರಾಜ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಶಶಿಕಾಂತ ಕೊಣ್ಣೂರ,
ಎನ್ ಸಿ ಸಿ ಅಧಿಕಾರಿಗಳಾದ ಡಾ.ಮಹೇಶ ಗುರನಗೌಡರ ,
ಡಾ. ಶಿವಾನಂದ ಬುಲಬುಲಿ , ಸ್ವಯಂ ಸೇವಕರಾದ ರಕ್ಷಿತಾ, ಕಾವ್ಯ, ಶ್ರೇಯಾ ಇನ್ನು ಹಲವು ಸ್ವಯಂ ಸೇವಕರು ಉಪಸ್ಥಿತರಿದ್ದರು.