ಶಿರಸಿ: ನಗರದ ಮಾರಿಕಾಂಬಾ ದೇವಾಲಯಕ್ಕೆ ಬರುವ ಭಕ್ತರಿಗೆ ದೇವಾಲಯದಲ್ಲಿ ಇನ್ನು ನಿರಂತರವಾಗಿ ಲಡ್ಡು ಪ್ರಸಾದ ಲಭ್ಯವಾಗಲಿದೆ.
ಶ್ರಾವಣ ಮಾಸದ ಮೊದಲ ಗುರುವಾರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರದ್ಧಾ-ಭಕ್ತಿಯಿಂದ ಲಡ್ಡು ಪ್ರಸಾದದ ಪ್ಯಾಕೆಟ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ದೇವಾಲಯದ ಧರ್ಮದರ್ಶಿ ಮಂಡಳಿಯು ಭಕ್ತರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದು, ವರ್ಷಪೂರ್ತಿ ನಿರಂತರವಾಗಿ ಭಕ್ತರಿಗೆ ಲಡ್ಡು ಪ್ರಸಾದ ದೊರೆಯಲಿದೆ.
'ಕ್ಷೇತ್ರಕ್ಕೆ ಬರುವ ಸಾರ್ವಜನಿಕರು ಹಾಗೂ ಭಕ್ತರು ದೇವಾಲಯದ ಪ್ರಸಾದ ಕೌಂಟರ್‌ನಲ್ಲಿ ಲಡ್ಡು ಪ್ರಸಾದ ಪಡೆಯಬಹುದು' ಎಂದು ಆಡಳಿತ ಮಂಡಳಿಯ ಅಧ್ಯಕ್ಷ ರವಿ ಬೆಳ್ಳೇಮನೆ ತಿಳಿಸಿದರು.
ದೇವಾಲಯ ಧರ್ಮದರ್ಶಿ ಮಂಡಳಿ ಉಪಾಧ್ಯಕ್ಷ ಅಶೋಕ ಪವಾರ, ಧರ್ಮದರ್ಶಿಗಳಾದ ಕೇಶವ ಹೆಗಡೆ, ವಿನಾಯಕ ಶೇಟ್, ಅರ್ಚನಾ ಹೊನ್ನಾವರ, ಬಾಬುದಾರ ಹಾಗೂ ಪ್ರಮುಖರಾದ ಜಗದೀಶ ಗೌಡ, ಶ್ರೀಕಾಂತ ಶೇಟ್, ಜಗದೀಶ ಕುರುಬರ, ರಾಮು ಕಿಣಿ ಇದ್ದರು.