Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೀದಿ ಗೂಳಿಗಳ ಕಾಳಗಕ್ಕೆ ಪಾದಚಾರಿ ಮಹಿಳೆ ಸಾವು

ಕಾರವಾರ: ಬೀದಿ ಗೂಳಿಗಳ ಕಾಳಗಕ್ಕೆ ಸಿಲುಕಿ ಅಮಾಯಕ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮೃತರನ್ನು ಮಲ್ಲಾಪುರ ಗ್ರಾಮದ ನಿವಾಸಿ ರಾಜೇಶ್ವರಿ (29) ಎಂದು ಗುರುತಿಸಲಾಗಿದೆ. ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಗ್ರಾಮದ ಸುಭದ್ರಾ ಹೋಟೆಲ್ ಸಮೀಪ ರಸ್ತೆಯಲ್ಲಿ ಕಾದಾಡುತ್ತಿದ್ದ ಎರಡು ಗೂಳಿಗಳು ಏಕಾಏಕಿ ರಾಜೇಶ್ವರಿ ಅವರ ಮೇಲೆ ರಭಸವಾಗಿ ಅಪ್ಪಳಿಸಿವೆ. ಗೂಳಿಗಳ ಗುದ್ದಾಟಕ್ಕೆ ಸಿಲುಕಿದ ಅವರು ಆಯತಪ್ಪಿ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣವೇ ರಾಜೇಶ್ವರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಾಯಗಳು ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಬೀದಿ ಗೂಳಿಗಳ ಹಾವಳಿ ನಿಯಂತ್ರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೇತಾಜಿ ಸುಭಾಷಚಂದ್ರ ಬೋಸ್‌ ವಿರುದ್ಧ ಹೇಳಿಕೆ : ಬಿಜೆಪಿ ಸಂಸದನಿಗೆ ನೀಡಿದ್ದ ‘ಬಂಗ ವಿಭೂಷಣ’ ಪ್ರಶಸ್ತಿ ಹಿಂಪಡೆದ ಬಂಗಾಳ ಸರ್ಕಾರಬೀದಿ ಗೂಳಿಗಳ ಕಾಳಗಕ್ಕೆ ಪಾದಚಾರಿ ಮಹಿಳೆ ಸಾವುಪಾಕಿಸ್ತಾನ–ಐಸಿಸ್‌ ನಂಟಿನ ಶಂಕೆ : ಕಲಬುರಗಿಯಲ್ಲಿ ಇಬ್ಬರು ವಶಕ್ಕೆಬೆಳಗಾವಿ : ಅನಗೋಳ ಬ್ರಹ್ಮ ಕುಮಾರಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯುವ ದಿನ ಶ್ರಾವಣ ಮಾಸದಲ್ಲಿ ಶಿವಯೋಗದ ಅನುಭಾವ ಅಗತ್ಯ: ಮಂಜುನಾಥ ಮಡಿವಾಳರ6 ಸ್ನೇಹಿತರು…ಹುಚ್ಚು ಕನಸು..ಕಾರು ಮಾರಾಟ..₹1.87 ಲಕ್ಷ: ಟೆಕ್‌ ದೈತ್ಯ ಎಚ್‌ಸಿಎಲ್‌ ಕಟ್ಟಿದ ರೋಚಕ ಕಥೆ ಬಿಚ್ಚಿಟ್ಟ ಸಹ-ಸಂಸ್ಥಾಪಕಲಷ್ಕರ್‌ ಉಗ್ರರ ಜತೆ ವೇದಿಕೆ ಹಂಚಿಕೊಂಡ ಪಾಕಿಸ್ತಾನದ ಮಾಜಿ ಸಚಿವ ; ಭಾರತ ನಾಶ ಮಾಡುವುದಾಗಿ ಬೆದರಿಕೆಪೊನ್ನಣ್ಣ, ದೇಶಪಾಂಡೆಗೆ ಮತ್ತೆ ಹಿಂದಿನ ಹುದ್ದೆಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಧಾನಸಭೆ ಪ್ರವೇಶಿಸುವ ಮುನ್ನ ಬಾಗಿಲಿಗೆ, ನಂತರ ಸಿಎಂ ಪೀಠಕ್ಕೆ ನಮಸ್ಕರಿಸಿದ ಸಿಎಂ..!ಸ್ವಾತಂತ್ರ್ಯ ದಿನಾಚರಣೆ: ಕೆಂಪು ಕೋಟೆ ಸುತ್ತ ಹದ್ದು, ಗಿಡುಗಗಳಿಗೆ ಕೋಳಿ ಮಾಂಸ