ಬೆಳಗಾವಿ : ಅನಗೋಳ ಬ್ರಹ್ಮ ಕುಮಾರಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯುವ ದಿನ ಆಚರಿಸಲಾಯಿತು.
ವಿದ್ಯಾ ಅವರ ಮಾರ್ಗದರ್ಶನದಲ್ಲಿ ಅಂತರಾಷ್ಟ್ರೀಯ ಯುವ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.
ಗೋಮಟೇಶ ಕಾಲೇಜಿನ ಅತ್ಯಂತ ಕಿರಿಯ ಪ್ರಾಂಶುಪಾಲ ಗೌತಮ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಐಟಿ ವೃತ್ತಿಪರರು, ಇಂಜಿನಿಯರ್‌ಗಳು, ಆರ್ಕಿಟೆಕ್ಟ್‌ಗಳು ಮತ್ತು ಹಣಕಾಸು ಕ್ಷೇತ್ರದವರು ಉಪಸ್ಥಿತರಿದ್ದರು.
ಶೀತಲ್ ಅವರು ಯುವ ದಿನದ ಇತಿಹಾಸ ಮತ್ತು ಅದರ ಉದ್ದೇಶದ ಬಗ್ಗೆ ಸಂಕ್ಷಿಪ್ತ ಪರಿಚಯ ನೀಡಿ, ಯುವಕರು ತಮ್ಮ ಆಂತರಿಕ ಶಕ್ತಿಯನ್ನು ಗುರುತಿಸಬೇಕು ಮತ್ತು ಉತ್ತಮ ಚಾರಿತ್ರ್ಯವನ್ನು ಕಾಪಾಡಿಕೊಳ್ಳಬೇಕು. ಆಧ್ಯಾತ್ಮಿಕ ಶಕ್ತಿ ಮತ್ತು ಮೌಲ್ಯಗಳಿಂದಲೇ ಭಾರತವನ್ನು ಸಬಲಗೊಳಿಸಬಹುದು. ಮೌಲ್ಯಗಳಿಲ್ಲದ ಜೀವನಕ್ಕೆ ಯಾವುದೇ ಮೌಲ್ಯವಿಲ್ಲ" ಎಂದು ಹೇಳಿದರು.
ಗೌತಮ ಅವರು, ಯುವ ವಿಜ್ಞಾನಿಗಳು ಮಾಡಿದ ರಾಕೆಟ್ ಉಡಾವಣೆ, ಡ್ರೋನ್ ಹಾರಾಟದಂತಹ ಇತ್ತೀಚಿನ ತಾಂತ್ರಿಕ ಪ್ರಗತಿಗಳ ಬಗ್ಗೆ ಮಾಹಿತಿ ನೀಡಿದರು.
ಬಸವೇಶ್ವರ ಅವರು, ಅರುಣಾಚಲ ಪ್ರದೇಶದಲ್ಲಿ ತಯಾರಾದ ಹಾರುವ ಕಾರಿನ ಬಗ್ಗೆ ಮಾತನಾಡಿದರು.
ದರ್ಶನ ಅವರು, ಯುವ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸುವ ಮಹತ್ವವನ್ನು ವಿವರಿಸಿದರು.
ಗುಂಡು ಅವರು ಮೆಕ್ಯಾನಿಕಲ್ ಇಂಜಿನಿಯರ್ ಅವರು ಬ್ರಹ್ಮ ಕುಮಾರೀಸ್ ಜೊತೆ ಸಂಪರ್ಕ ಹೊಂದಿದ ನಂತರ ತಮ್ಮ ಜೀವನದಲ್ಲಿ ಆದ ಬದಲಾವಣೆಯನ್ನು ಹಂಚಿಕೊಂಡರು.
ಬ್ರಹ್ಮ ಕುಮಾರೀಸ್ ಯುವ ವಿಭಾಗ ಸಂಯೋಜಕ ಶ್ರೀಕಾಂತ ಅವರು 'Touch the Light'_ ಯೋಜನೆಯ ಮೂಲಕ ಯುವಕರನ್ನು ನಕಾರಾತ್ಮಕತೆಯಿಂದ ಸಕಾರಾತ್ಮಕತೆಗೆ ತರುವ ಕೆಲಸ ಮಾಡುತ್ತಿರುವುದನ್ನು ತಿಳಿಸಿದರು.
ವಿದ್ಯಾ ಅವರು ಭಾರತದ ಶೇಕಡಾ 65ರಷ್ಟು ಇರುವ ಯುವಕರ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಆಧ್ಯಾತ್ಮವನ್ನು ತರಲು ರಾಜಯೋಗ ಧ್ಯಾನದ ಮಹತ್ವವನ್ನು ಒತ್ತಿ ಹೇಳಿದರು. ಸಾಫ್ಟ್‌ವೇರ್ ಇಂಜಿನಿಯರ್ ಪೂರ್ಣಿಮಾ ನಿರೂಪಿಸಿದರು.