ಬೆಳಗಾವಿ : ಪ್ರತಿಯೊಬ್ಬರಲ್ಲಿ ಪರಿಸರ ಸಂರಕ್ಷಣೆ ಪ್ರಜ್ಞೆಯನ್ನು ಜಾಗೃತಿಗೊಳಿಸಬೇಕು. ಮನೆಗೊಂದು ಸಸಿ ನೆಡುವುದರ ಮೂಲಕ
ಪಕ್ಷಿ ಸಂಕುಲ ರಕ್ಷಿಸಬೇಕು.ಯುವಕರಲ್ಲಿ ಪರಿಸರ ಕುರಿತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬೇಕು ಎಂದು ಆರ್ ಎಲ್ ಎಸ್
ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಪ್ರೊ.ಎಸ್.ಬಿ. ತಾರದಾಳೆ ಹೇಳಿದರು.
ನಗರದ ಕೆ ಎಲ್ ಇ ಸಂಸ್ಥೆಯ,ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ದಿನಾಂಕ 13/08/2026 ರಂದು ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ಯುಥ್ ಫಾರ್ ಸೇವಾ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಕಣಬರ್ಗಿ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಪಕ್ವಾಡ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡಬೇಕು. ಪ್ರತಿ ಮನೆಯಲ್ಲಿ ಸಸಿ ನೆಡಬೇಕು. ಪ್ರಕೃತಿಯನ್ನು ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಇಂದಿನ ವಿದ್ಯಾರ್ಥಿಗಳಿಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸಬೇಕು. ಯುವಕರಲ್ಲಿ ಪರಿಸರ ಕುರಿತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬೇಕು.
ಶಾಲಾ-ಕಾಲೇಜುಗಳ ಪಠ್ಯಗಳಲ್ಲಿ ನಿಸರ್ಗ ಬಗ್ಗೆ ಲೇಖನಗಳ ಪರಿಚಯ ಮಾಡಿಸಬೇಕು. ಪ್ರತಿಯೊಂದು ಗ್ರಾಮವನ್ನು ಸ್ವಚ್ಛತೆ ಇರುವಂತೆ ಕಾಪಾಡಬೇಕೆಂದು ಹೇಳಿದರು.
ಯೂಥ್ ಫಾರ್ ಸೇವಾ ಸಂಸ್ಥೆಯ ಸಂಯೋಜಕ ಸಂತೋಷ ಖೋತ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಬೇಕೆಂದು ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರು , ಸ್ವಯಂ ಸೇವಕರಾದ ರಕ್ಷಿತಾ, ಕಾವ್ಯ, ಶ್ರೇಯಾ, ಕಿರಣ ,ಅರಿಹಂತ ಪ್ರತೀಕ ಇನ್ನು ಹಲವು ಸ್ವಯಂ ಸೇವಕರು ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಪಕ್ಕ ಅಭಿಯಾನದಲ್ಲಿ ಭಾಗವಹಿಸಿದ್ದರು.