Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕರ್ನಾಟಕದಲ್ಲಿ ಗುಟ್ಕಾ-ಪಾನ್‌ ಮಸಾಲಾ ಮಾರಾಟ ನಿಷೇಧ ಆದೇಶ  ವಾಪಸ್

ಬೆಂಗಳೂರು: ಗುಟ್ಕಾ-ಪಾನ್ ಮಸಾಲ ಮಾರಾಟ ನಿಷೇಧ (Gutka Ban) ಆದೇಶವನ್ನು ರಾಜ್ಯ ಸರ್ಕಾರ ವಾಪಸ್‌ ಪಡೆಯುವ ಸಾಧ್ಯತೆಯಿದೆ.
ರಾಜ್ಯಾದ್ಯಂತ ನಿಕೋಟಿನ್‌ಯುಕ್ತ ಗುಟ್ಕಾ ಮತ್ತು ಪಾನ್ ಮಸಾಲ ಮಾರಾಟವನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ಹೊರಡಿಸಲಾಗಿದ್ದ ಸರ್ಕಾರದ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಅಧಿಕೃತವಾಗಿ ನಿಷೇಧ ಆದೇಶ ರದ್ದುಗೊಂಡಿರುವ ಬಗ್ಗೆ ಸರ್ಕಾರದಿಂದ ಆದೇಶ ಹೊರಬಿದ್ದಿಲ್ಲ.
ಆರೋಗ್ಯ ಇಲಾಖೆ ಏಕಾಏಕಿ ಕೈಗೊಂಡಿದ್ದ ಈ ನಿರ್ಧಾರಕ್ಕೆ ಆಡಳಿತ ಪಕ್ಷದ ಶಾಸಕರು ಹಾಗೂ ರೈತ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಮುಖ್ಯಮಂತ್ರಿಗಳು ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ಈ ನಿಷೇಧದ ತೀರ್ಮಾನಕ್ಕೆ ಸ್ವತಃ ಕಾಂಗ್ರೆಸ್‌ನ ಕೆಲವು ಹಿರಿಯ ಶಾಸಕರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಗುರುವಾರ  ಶಾಸಕರ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ರಾಜ್ಯದ ವಿವಿಧ ಭಾಗಗಳ ರೈತರ ಹಿತದೃಷ್ಟಿಯಿಂದ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಮನವಿ ಮಾಡಿತ್ತು.
ಈ ವೇಳೆ   ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು “ಈ ನಿರ್ಧಾರದ ಕುರಿತು ನನಗೆ ಯಾವುದೇ ರೀತಿಯ ಮುನ್ಸೂಚನೆ ಅಥವಾ ಮಾಹಿತಿ ಇರಲಿಲ್ಲ” ಎಂದು ಅವರಿಗೆ ತಿಳಿಸಿದರು ಎನ್ನಲಾಗಿದೆ.
ಬಳಿಕ ನಡೆದ ರಾಜ್ಯ ಸಂಪುಟ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಯಿತು. ಈ ವೇಳೆ ಆರೋಗ್ಯ ಇಲಾಖೆ ಕಾರ್ಯದರ್ಶಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, “ಇಂತಹ ಮಹತ್ವದ ಆದೇಶವನ್ನು ನನ್ನ ಗಮನಕ್ಕೆ ತರದೆ ಹೇಗೆ ಹೊರಡಿಸಲಾಯಿತು? ಈ ನಿರ್ಧಾರದಿಂದ ರಾಜ್ಯದ ಸುಮಾರು 7 ರಿಂದ 8 ಜಿಲ್ಲೆಗಳ ರೈತರ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಇಂತಹ ಪ್ರಮುಖ ನೀತಿ ನಿರ್ಧಾರ ಕೈಗೊಳ್ಳುವ ಮುನ್ನ ನನ್ನ ಗಮನಕ್ಕೆ ಯಾಕೆ ತರಲಿಲ್ಲ” ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಏಕಾಏಕಿ ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧ ಆದೇಶ ಮಾಡಿದ್ದನ್ನು ಹಿಂಪಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಶೀಘ್ರದಲ್ಲೇ ಈ ಹಿಂದಿನ ಆದೇಶ ತೆಗೆದುಕೊಳ್ಳುವ ಸಾಧ್ಯತೆ ಇದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಿಂಗರಾಜ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಕಣಬರಗಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನಪ್ರತಿಯೊಬ್ಬರಲ್ಲಿ ಪರಿಸರ ಸಂರಕ್ಷಣೆ ಪ್ರಜ್ಞೆಯನ್ನು ಜಾಗೃತಿಗೊಳಿಸಬೇಕು : ಎಸ್.ಬಿ.ತಾರದಾಳೆದೇಶದ ಅಭಿವೃದ್ಧಿಗೆ ಶ್ರಮಿಸುವುದು ನಿಜವಾದ ದೇಶಪ್ರೇಮ : ಎಸ್.ಬಿ.ತಾರದಾಳೆಶಿರಸಿಯ ಸುಪ್ರಸಿದ್ಧ. ಮಾರಿಕಾಂಬಾ ದೇಗುಲದಲ್ಲಿ ಭಕ್ತರಿಗೆ ಇನ್ನು ನಿರಂತರ ಲಡ್ಡು ಪ್ರಸಾದ ಲಭ್ಯಕರ್ನಾಟಕದಲ್ಲಿ ಗುಟ್ಕಾ-ಪಾನ್‌ ಮಸಾಲಾ ಮಾರಾಟ ನಿಷೇಧ ಆದೇಶ  ವಾಪಸ್ಪಡಿತರ ಚೀಟಿ -ಕೆವೈಸಿ ಕಡ್ಡಾಯ: ಮುಂದಿನ ತಿಂಗಳಿನಿಂದ ಪಡಿತರ ಸ್ಥಗಿತವಾಗದಿರಲು ಈಗಲೇ ಕ್ರಮ ತೆಗೆದುಕೊಳ್ಳಿನೇತಾಜಿ ಸುಭಾಷಚಂದ್ರ ಬೋಸ್‌ ವಿರುದ್ಧ ಹೇಳಿಕೆ : ಬಿಜೆಪಿ ಸಂಸದನಿಗೆ ನೀಡಿದ್ದ ‘ಬಂಗ ವಿಭೂಷಣ’ ಪ್ರಶಸ್ತಿ ಹಿಂಪಡೆದ ಬಂಗಾಳ ಸರ್ಕಾರಬೀದಿ ಗೂಳಿಗಳ ಕಾಳಗಕ್ಕೆ ಪಾದಚಾರಿ ಮಹಿಳೆ ಸಾವುಪಾಕಿಸ್ತಾನ–ಐಸಿಸ್‌ ನಂಟಿನ ಶಂಕೆ : ಕಲಬುರಗಿಯಲ್ಲಿ ಇಬ್ಬರು ವಶಕ್ಕೆಬೆಳಗಾವಿ : ಅನಗೋಳ ಬ್ರಹ್ಮ ಕುಮಾರಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯುವ ದಿನ