ಖಾನಾಪುರ: ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜಯಂತಿಯ ಅಂಗವಾಗಿ ಸೋಮವಾರ ಖಾನಾಪುರ ತಾಲೂಕು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ಪಕ್ಷದ ಮುಖ್ಯ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಭಾವಪೂರ್ಣ ಗೌರವ ನಮನ ಸಲ್ಲಿಸಲಾಯಿತು.
ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ ಅವರು ಡಾ. ಮುಖರ್ಜಿ ಅವರ ದೇಶಸೇವೆ ಮತ್ತು ತ್ಯಾಗವನ್ನು ಶ್ಲಾಘಿಸಿದರು. ದೇಶದ ಏಕತೆಗಾಗಿ ಅವರು ನೀಡಿದ ಕೊಡುಗೆ ಯಾವಾಗಲೂ ಪ್ರೇರಣಾದಾಯಕವಾಗಿರುತ್ತದೆ ಎಂದು ಹೇಳಿದರು.
ಬಿಜೆಪಿ ಖಾನಾಪುರ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜ್ಯೋತಿಬಾ ರೇಮಾನಿ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ಬಿಜೆಪಿ ನಾಯಕ ಯಶವಂತ ಕಡೋಳಿ, ಕಚೇರಿ ಕಾರ್ಯದರ್ಶಿ ರವಿ ಪಾಟೀಲ, ಪಕ್ಷದ ಇತರ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.