Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಜ್ಯದಲ್ಲಿ ಮುಂಗಾರು ನೀರಸ ; 17 ಜಿಲ್ಲೆಗಳು, 129 ತಾಲೂಕುಗಳಲ್ಲಿ ಮಳೆ ಕೊರತೆ

ಬೆಂಗಳೂರು : ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ಕೊರತೆ ಮುಂದುವರಿದಿದ್ದು, ಜೂನ್ 1ರಿಂದ ಜುಲೈ 6ರ ವರೆಗೆ ಮುಂಗಾರು ಮಳೆ ಬಿದ್ದ ಪ್ರಮಾಣ ಗಮಿಸಿದರೆ 31 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಲ್ಲಿ ಮಳೆ ಕೊರತೆ(Deficit)ಯಾಗಿದೆ.

13 ಜಿಲ್ಲೆಗಳಲ್ಲಿ ಬಹುತೇಕ ವಾಡಿಕೆ (Normal)ಯಷ್ಟು ಮಳೆಯಾಗಿದ್ದರೆ ಒಂದು ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಪ್ರಕಟಿಸಿದ ವರದಿ ತಿಳಿಸಿದೆ.
ವರದಿ ಪ್ರಕಾರ, ತುಮಕೂರು ಜಿಲ್ಲೆಯಲ್ಲಿ ಶೇ.17, ಚಿಕ್ಕಬಳ್ಳಾಪುರ ಶೇ.12, ಬೆಂಗಳೂರು ಗ್ರಾಮಾಂತರ ಶೇ.10, ಮಂಡ್ಯ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ತಲಾ ಶೇ.6, ಬೆಂಗಳೂರು ನಗರದಲ್ಲಿ ಶೇ.4 ಮತ್ತು ಬೆಳಗಾವಿಯಲ್ಲಿ ಶೇ.2ರಷ್ಟು ಹೆಚ್ಚುವರಿ ಅಥವಾ ವಾಡಿಕೆ ಮಳೆ ದಾಖಲಾಗಿದೆ.
ಬಾಗಲಕೋಟೆ (-2%), ಕೋಲಾರ (-9%), ಚಿತ್ರದುರ್ಗ (-11%), ಬಳ್ಳಾರಿ (-11%), ಚಾಮರಾಜನಗರ (-19%) ಹಾಗೂ ವಿಜಯಪುರ (-19%) ಜಿಲ್ಲೆಗಳಲ್ಲಿಯೂ ಮಳೆ ಕೊರತೆ ಇದ್ದರೂ, ಅವು ಕೂಡ ಬಹುತೇಕ ವಾಡಿಕೆಯಷ್ಟು ಮಳೆಯಾಗಿದ್ದರಿಂದ ಇವುಗಳ ಸಹ ವಾಡಿಕೆ ಮಳೆಯಾದ ಜಿಲ್ಲೆಗಳ ಪಟ್ಟಿಗೆ ಸೇರ್ಪಡೆಯಾಗಿವೆ.

ಧಾರವಾಡ (-20%), ಯಾದಗಿರಿ (-22%), ಗದಗ (-22%), ರಾಯಚೂರು (-25%), ಉತ್ತರ ಕನ್ನಡ (-29%), ಹಾಸನ (-33%), ಕೊಪ್ಪಳ (-33%), ಉಡುಪಿ (-38%), ಬೀದರ್ (-40%), ದಕ್ಷಿಣ ಕನ್ನಡ (-43%), ಕಲಬುರಗಿ (-43%), ಶಿವಮೊಗ್ಗ (-44%), ಹಾವೇರಿ (-46%), ದಾವಣಗೆರೆ (-47%), ಚಿಕ್ಕಮಗಳೂರು (-48%), ಕೊಡಗು (-51%) ಹಾಗೂ ಮೈಸೂರು (-55%) ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಕೊರತೆ ವಿಜಯನಗರ ಜಿಲ್ಲೆಯಲ್ಲಿ ದಾಖಲಾಗಿದ್ದು, ಶೇ.61ರಷ್ಟು ತೀವ್ರ ಮಳೆ ಕೊರತೆ (Large Deficit) ಎದುರಾಗಿದೆ.
ಜೂನ್ 1ರಿಂದ ಜುಲೈ 6ರ ವರೆಗಿನ ಒಟ್ಟಾರೆ ನೈಋತ್ಯ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ 249 ಮಿ.ಮೀ.ಯಷ್ಟು ವಾಡಿಕೆಯ ಮಳೆಯ ಬದಲಿಗೆ 165 ಮಿ.ಮೀ. ಮಳೆಯಾಗಿದ್ದು, ಶೇ.34ರಷ್ಟು ಮಳೆ ಕೊರತೆ ದಾಖಲಾಗಿದೆ.

ಪ್ರದೇಶವಾರು ಮಳೆ ಸ್ಥಿತಿ
ದಕ್ಷಿಣ ಒಳನಾಡು ಕರ್ನಾಟಕ: ಶೇ.13 ಮಳೆ ಕೊರತೆ.
ಉತ್ತರ ಒಳನಾಡು ಕರ್ನಾಟಕ: ಶೇ.23 ಮಳೆ ಕೊರತೆ.
ಮಲೆನಾಡು: ಶೇ.46 ಮಳೆ ಕೊರತೆ.
ಕರಾವಳಿ: ಶೇ.35 ಮಳೆ ಕೊರತೆ.
ಜಿಲ್ಲೆಗಳ ಮಳೆ ವರ್ಗೀಕರಣ
ವಾಡಿಕೆ ಮಳೆಯಾದ ಪ್ರದೇಶಗಳು : 13 ಜಿಲ್ಲೆಗಳು, 70 ತಾಲ್ಲೂಕುಗಳು.
ಮಳೆ ಕೊರತೆ: 17 ಜಿಲ್ಲೆಗಳು, 129 ತಾಲ್ಲೂಕುಗಳು
ಅತೀ ಮಳೆ ಕೊರತೆ: 1 ಜಿಲ್ಲೆ, 11 ತಾಲ್ಲೂಕುಗಳು
ಹೆಚ್ಚುವರಿ ಮಳೆ: 25 ತಾಲ್ಲೂಕುಗಳಲ್ಲಿ ದಾಖಲಾಗಿದೆ.
ಅತಿಹೆಚ್ಚು ಮಳೆ: 5 ತಾಲ್ಲೂಕುಗಳಲ್ಲಿ ದಾಖಲಾಗಿದೆ.

ಜುಲೈ 1 ರಿಂದ 6 ರ ವರೆಗಿನ ಮಳೆಯ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಶೇ.134ರಷ್ಟು, ಬಾಗಲಕೋಟೆಯಲ್ಲಿ ಶೇ.50, ಉತ್ತರ ಕನ್ನಡದಲ್ಲಿ ಶೇ.25, ದಕ್ಷಿಣ ಕನ್ನಡದಲ್ಲಿ ಶೇ.13 ಹಾಗೂ ಉಡುಪಿಯಲ್ಲಿ ಶೇ.7ರಷ್ಟು ಹೆಚ್ಚುವರಿ ಮಳೆಯಾಗಿದೆ. ಆದರೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜುಲೈ ಮೊದಲ ವಾರದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ದಾಖಲಾಗಿದ್ದರೂ, ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದ ಕಾರಣ ಒಟ್ಟಾರೆ ಮುಂಗಾರು ಮಳೆ ಸ್ಥಿತಿ ಸಾಮಾನ್ಯ ವಿಭಾಗದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಒಟ್ಟಾರೆ, ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರಿದಿದ್ದು, ರಾಜ್ಯದ ಮುಂಗಾರು ಮಳೆಯ ಪರಿಸ್ಥಿತಿ ಇನ್ನೂ ಸುಧಾರಿಸಬೇಕಿದೆ ಎಂದು ವರದಿ ಸೂಚಿಸಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕರೆ: ಪ್ರವೀಣ ಗುಡಿಜಗತ್ತಿನ ಆವಿಷ್ಕಾರದಲ್ಲಿ ನ್ಯಾನೋ ತಂತ್ರಜ್ಞಾನದ ಪಾತ್ರ ಅಪಾರ: ಕುಲಪತಿ ಸಿ. ಎಂ. ತ್ಯಾಗರಾಜ ಆಡಳಿತದಲ್ಲಿ ಇನ್ಮುಂದೆ 'ಬಂಗಾಳಿ' ಕಡ್ಡಾಯ: ಪಶ್ಚಿಮ ಬಂಗಾಳ ಸಿಎಂ ಸುವೇಂದು ಘೋಷಣೆಕೌಶಲ್ಯ ಅಭಿವೃದ್ಧಿ ಯುವಕರ ಭವಿಷ್ಯದ ಕೀಲಿ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಕಾರ್ಯ ಸ್ತುತ್ಯಾರ್ಹ : ಪ್ರೊ. ಹೊಸಕೋಟಿಬಿಸಿಸಿಐ ಚುನಾವಣೆ : ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆಒಡೆಸಾ ಬಂದರಿನಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ: ನಾಲ್ವರು ಭಾರತೀಯರು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರಸಿಜೆಪಿ ನಾಯಕರ ಜೊತೆ ಸೌಹಾರ್ದಯುತ ಮಾತುಕತೆ ಬಳಿಕ ಧರಣಿ ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರದ ಮನವಿನ್ಯಾನೋ ಜಾಥಾ-2026' ಕಾರ್ಯಕ್ರಮ