ಬೆಂಗಳೂರು :
ಜೈನ ಮುನಿ ನಂದಿ ಮಹಾರಾಜರ ಹತ್ಯೆಗೆ, ನಟ ಪ್ರಥಮ್ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಶ್ವಕ್ಕೆ ಅಹಿಂಸೆ ಸಾರುವ ಜೈನ ಮುನಿಗಳ ಹತ್ಯೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಸಚಿವ ರಾಮಲಿಂಗಾರೆಡ್ಡಿಯವರೇ ದಯವಿಟ್ಟು ಜೈನರ ರಕ್ಷಣೆಗೆ ಮುಂದಾಗಿ, ಸಲ್ಲೇಖನ ವ್ರತ ಕೈಗೊಂಡವರೊಟ್ಟಿಗೆ ಕೂಡಲೇ ಚರ್ಚಿಸಿ, ಧೈರ್ಯ ನೀಡಿ. ಪ್ರಜ್ಞಾವಂತರು, ಕಲಾವಿದರು ಇದರ ಬಗ್ಗೆ ದನಿ ಎತ್ತಬೇಕಿತ್ತು. ಹೋಗಲಿ ಬಿಡಿ; ಸಿಎಂ, ಗೃಹಮಂತ್ರಿಗಳೇ ಜೈನರನ್ನು ಕಾಪಾಡಿ ಎಂದು ಪ್ರಥಮ್ ಮನವಿ ಮಾಡಿದ್ದಾರೆ.