This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ಅಪ್ಪ: 20 ಸಾವಿರ ದಂಡ ವಿಧಿಸಿದ ಕೋರ್ಟ್ ! Father who gave a bike to his minor son: the court imposed a fine of 20 thousand!


 

ಮಂಗಳೂರು :
ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ಮಾಡಿಕೊಡುವ ಮೂಲಕ ಅಪಘಾತಕ್ಕೆ ಕಾರಣನಾದ ಅಪ್ಪನಿಗೆ ಪುತ್ತೂರು ನ್ಯಾಯಾಲಯ 20 ಸಾವಿರ ದಂಡ ವಿಧಿಸಿದೆ.
ಕಡಬ ತಾಲೂಕಿನ ಕೊಯಿಲ ಗ್ರಾಮದ ಅಬ್ದುಲ್ ರಹಮಾನ್ 2020ರಲ್ಲಿ ತಮ್ಮ ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದರು.
ಮಗ ಬೈಕ್ ಚಲಾಯಿಸುವ ವೇಳೆ ಅಪಘಾತ ಎಸಗಿದ್ದ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯ ವಾಹನದ ಮಾಲಿಕರಾದ ಅಪ್ರಾಪ್ತನ ಅಪ್ಪನಿಗೆ 20 ಸಾವಿರ ದಂಡ ವಿಧಿಸಿದೆ.
ಮೋಟಾರು ವಾಹನ ಕಾಯ್ದೆಯ ನಿಯಮಗಳ ಪ್ರಕಾರ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ನೀಡಿದರೆ ಸಂಬಂಧಪಟ್ಟ ವಾಹನದ ಮಾಲಿಕರಿಗೆ/ಪೋಷಕರಿಗೆ ದಂಡ, 3 ವರ್ಷ ಜೈಲು ಶಿಕ್ಷೆ ಹಾಗೂ ವಾಹನದ ನೋಂದಣಿಯನ್ನು ರದ್ದುಪಡಿಸಬಹುದಾಗಿದೆ.


Jana Jeevala
the authorJana Jeevala

Leave a Reply