ಬೆಂಗಳೂರು :
ನೀತಿ ಸಂಹಿತೆ ಹಿನ್ನೆಲೆ ಬೆಂಗಳೂರಿನಲ್ಲಿ ಆರ್ಟಿಒ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ . ಪಕ್ಷದ ಚಿಹ್ನೆ , ರಾಜಕಾರಣಿ ಫೋಟೋ ಅಂಟಿಸಿರುವ ಆಟೋಗಳ ಮೇಲೆ ನಿಗಾ ಇಡಲಾಗುತ್ತಿದೆ . ಆಟೋಗಳ ಮೇಲೆ ರಾಜಕಾರಣಿಗಳ ಭಾವಚಿತ್ರ , ಪಕ್ಷಗಳ ಚಿಹ್ನೆ ಇದ್ರೆ ದಂಡ ಹಾಕಲಾಗುತ್ತಿದೆ . ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಆರ್ ಟಿ ಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆಟೋ ಮೇಲೆ ರಾಜಕೀಯ ಪ್ರೇರಿತ ಫೋಟೋ , ಚಿಹ್ನೆ ಇದ್ದರೆ 75,000 ದಂಡ ವಿಧಿಸುತ್ತಿದ್ದಾರೆ . ಜೆಡಿಎಸ್ ಪರ ಪ್ರಚಾರ ಮಾಡುವಂತೆ ಕವರ್ ಅಂಟಿಸಿದ್ದ ಆಟೋ ಚಾಲಕನಿಗೆ ಆರ್ ಟಿ ಒ ಅಧಿಕಾರಿಗಳು 5 ಸಾವಿರ ರೂ . ದಂಡ ವಿಧಿಸಿದ್ದಾರೆ. ಅಧಿಕಾರಿಗಳು ಪರ್ಮಿಟ್ ಉಲ್ಲಂಘನೆ ಕೇಸ್ ದಾಖಲು ಮಾಡುತ್ತಿದ್ದಾರೆ . ಕೇಸ್ ಹಾಕಿ 2 ಸಾವಿರ ರೂಪಾಯಿ ಫೈನ್ ಹಾಕುತ್ತಿದ್ದಾರೆ . ಸದ್ಯ ಎರಡು ಆಟೋಗಳಿಗೆ ದಂಡ ಹಾಕಲಾಗಿದೆ .