ಬೆಳಗಾವಿ : ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಾಬಳಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಮಕನಮರಡಿ ಪೋಲಿಸರು ಯಶಸ್ವಿಯಾಗಿದ್ದಾರೆ.
ರಾಮಚಂದ್ರ ಫಕೀರಪ್ಪ ತಳವಾರ, ಸುರೇಶ ಲಕ್ಕಪ್ಪ ಪಾಟೀಲ, ಹಾಗೂ ಯಲ್ಲಪ್ಪಾ ಸೋಮನಿಂಗ ದಂಡು ಬಂಧಿತ ಆರೋಪಿಗಳು.
ಕಾಟಾಬಳಿ ಗ್ರಾಮದ ಛಾಯಾ ಯಲ್ಲಪ್ಪ ದೇಶ್ನೂರ ಎಂಬುವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಮೇಲ್ಛಾವಣಿ ತೆಗೆದು ಮನೆಯಲ್ಲಿದ್ದ ಬಂಗಾರದ ಚೈನ್, ಬ್ರಾಸಲೇಟ್ , ಕಿವಿಓಲೆ , ಹಾಗೂ ಬೆಳ್ಳಿಯ ಬ್ರಾಸಲೇಟ್ ಹೀಗೆ ಒಟ್ಟು 78,000 ರೂ ಮೌಲ್ಯದ ಆಭರಣಗಳುನ್ನು ಕಳ್ಳತನ ಆಗಿತ್ತು.
ಈ ಬಗ್ಗೆ ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಾಗಿ ವಿಷೇಶ ತಂಡವನ್ನು ರಚಿಸಲಾಗಿತ್ತು, ಬೆಳಗಾವಿಯ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಯಮಕನಮರಡಿಯ ಪಿ.ಐ. ಜಾವೇದ್ ಮುಶಾಪುರಿ ಅವರ ನೇತೃತ್ವದ ತಂಡವು ಕಾರ್ಯಚರಣೆಯನ್ನು ನಡೆಸಿ ಆರೋಪಿಗಳನ್ನು ಬಂದಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.