Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿ ಒಂದು ಜಗಳ, ಮೂರು ಸಾವು..!

ಬೆಳಗಾವಿಯಲ್ಲಿ ಒಂದು ಜಗಳ ಮೂರು ಸಾವು..!

ನಶೆಯಲ್ಲಿ ವಿಷ ಸೇವಿಸಿದ್ದ ಮಸ್ತಿ ಸಂಸಾರ ಆಯಿತು ಸರ್ವನಾಶ..!

ಬೆಳಗಾವಿ: ಮನೆ ನಡೆಸಬೇಕಾಗಿದ್ದ ಒಡೆಯ ಸರಾಯಿ ಕುಡಿದು ಸಂಸಾರದಲ್ಲಿ ರಸ ಕಳೆದುಕೊಂಡು ಮಡದಿಯೊಂದಿಗೆ ಜಗಳವಾಡಿದ್ದಾನೆ. ನಶೆಯಲ್ಲಿ ವಿಷ ಕುಡಿದು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ. ಮನೆ ಯಜಮಾನನ್ನು ಕಳೆದುಕೊಂಡ ಮಡದಿ ತನ್ನ ಮುದ್ದು ಕಂದನನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾಳೆ. ಇಂತಹ ಕರುಳು ಕಿತ್ತು ಬರುವ ಭೀಕರ ಘಟನೆಯೊಂದು ಇಂದು ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ ..?

ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ 25 ವರ್ಷದ ಹೊಳೆಪ್ಪಾ ಮಾರುತಿ ಮಸ್ತಿ ಎಂಬಾತ ನಿನ್ನೆ (ಗುರುವಾರ-20 )ಸರಾಯಿ ಕುಡಿದು ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕಾಗಿ ಪತ್ನಿ ವಾಸಂತಿಯೊಂದಿಗೆ ಜಗಳವಾಡಿದ್ದಾನೆ. ಅದೆ ಗುಂಗಿನಲ್ಲಿ ವಿಷ ಸೇವಿಸಿದ್ದಾನೆ. ತಕ್ಷಣ ಇತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೇ ಸಾವನಪ್ಪಿದ್ದಾನೆ.

ಪತಿಯ ಸಾವಿನಿಂದಾಗಿ ತಿವ್ರವಾಗಿ ಮನನೊಂದ ಪತ್ನಿ ವಾಸಂತಿವ ಇಂದು (ಶುಕ್ರವಾರ) ಮಧ್ಯಾಹ್ನ ತನ್ನ ಒಂದೂವರೆ ವರ್ಷದ ಎರಡನೇ ಮಗಳನ್ನು ಎತ್ತಿಕೊಂಡು ಸಮೀಪದ ಮುಸ್ಲಿಂ ಒಬ್ಬರ ಹೊಲಕ್ಕೆ ಹೋಗಿದ್ದಾಳೆ. ಮೊದಲು ಮಗಳನ್ನು ಕತ್ತು ಹಿಸುಕಿ ಸಾಯಿಸಿದ್ದಾಳೆ. ನಂತರ ತಾನೂ ಓಡನಿಯಿಂದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಒಂದು ಜಗಳ ಪತಿ- ಪತ್ನಿ ಅಷ್ಟೇ ಅಲ್ಲದೆ ಬದುಕಿ ಬಾಳ ಬೇಕಾಗಿದ್ದ ಏನು ಅರಿಯದ ಮುದ್ದು ಕಂದಮ್ಮಳ ಪ್ರಾಣವನ್ನು ಕಸಿದುಕೊಂಡು ಇಡಿ ಕುಟುಂಬವೇ ಸಾವಿಗೆ ಶರಣಾಗಿರುವ ಘಟನೆ ಕಂಡು ಇಡಿ ವಂಟಮೂರಿ ಗ್ರಾಮವೇ ಬೆಚ್ಚಿ ಬಿದ್ದಿದು, ಮನಕುಲದ ಮನಃ ಕರುಗುವಂತಹ ದುರಂತವೊಂದು ನಡೆದಿದೆ.

ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಪಿಐ ಗುರುನಾಥ ಐ ಎಸ್, ಪಿಎಸ್ಐ ಮಂಜುನಾಥ ಹುಲಕುಂದ ಸಿಬ್ಬಂದಿ ಪ್ರಕಾಶ ಬಲ್ಲಾಳ, ವಿರುಪಾಕ್ಷೀ ಮಾನಗಾವಿ ಸೇರಿದಂತೆ ಇತರರು ಘಟನೆ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ