Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಇಪ್ಪತ್ತಕ್ಕೂ ಹೆಚ್ಚು ಬೈಕ್ ಕದ್ದ ತ್ರಿಮೂರ್ತಿಗಳು ಕಂಬಿ ಹಿಂದೆ...!  

ಬೆಳಗಾವಿ : ಜನಜೀವಾಳ ಜಾಲ : ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಮೋಟರ್ ಸೈಕಲಗಳನ್ನು ಕಳವು ಮಾಡಿದ ಮೂರು ಆರೋಪಿತರನ್ನು  ಬಂಧಿಸಲಾಗಿದೆ. ಸುಮಾರು 11,73,000/-ರೂ. ಮೌಲ್ಯದ ಒಟ್ಟು 20 ಮೋಟರ್ ಸೈಕಲಗಳನ್ನು ಪಡಿಸಿಕೊಳ್ಳಲಾಗಿದೆ.
ದಿನಾಂಕ 23/04/2026 ರಂದು ಶ್ರೀ. ದಿಲಿಪ ತುಕಾರಾಮ ಜಾಧವ, ಸಾ॥ ಹೊನಗಾ ತಾಜಿ॥ ಬೆಳಗಾವಿ ಇವರು ಯಳ್ಳೂರ ಗ್ರಾಮದಲ್ಲಿ ತನ್ನ ಮೋಟರ್ ಸೈಕಲ ನಂಬರ ಕೆಎ-22/ಇವಾಯ್-6688 ನೇದ್ದು ಕಳ್ಳತನ ಆಗಿರುವ ಬಗ್ಗೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದಂತೆ ಬೆಳಗಾವಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 105/2026 ಕಲಂ 303(2) ಬಿಎನ್ಎಸ್ ನೇದ್ದರಡಿ ಪ್ರಕರಣ ದಾಖಲ ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.  ದಿ. 2 ರಂದು  ಈ ಕೆಳಗಿನ ಆರೋಪಿಗಳನ್ನು ಬಂಧಿಸಲಾಗಿದೆ.
1) ಫಕೀರಪ್ಪ ಸಿದ್ದಪ್ಪ ಕರಿಗಾರ ವಯಸ್ಸು 25 ವರ್ಷ, ಸಾ॥ ಹೀರೆಹಟ್ಟಿ ತಾ॥ ಗೋಕಾಕ ಜಿ॥ ಬೆಳಗಾವಿ
2) ರಮೇಶ ಪ್ರಭು ಪಾಟೀಲ, ವಯಸ್ಸು 23 ವರ್ಷ, ಸಾ॥ ಆಲದಾಳ ತಾ॥ ಹುಕ್ಕೇರಿ ಜಿ॥ ಬೆಳಗಾವಿ
3) ಕಮಲಪ್ಪ @ ಕಮಲು ಯಲ್ಲಪ್ಪ ಗುಂಡ್ಯಾಗೋಳ, ವಯಸ್ಸು 38 ವರ್ಷ, ಸಾ|| ಕೆಂಚನಟ್ಟಿ, ಮಾರ್ಕಂಡೇಯ ನಗರ ತಾ॥ ಬೆಳಗಾವಿ
 ಯಳ್ಳೂರದಲ್ಲಿ ಒಂದು ಮತ್ತು ಮಾರ್ಕಂಡೇಯನಗರದಲ್ಲಿ ಒಂದು ಹಾಗೂ ಬೆಳಗಾವಿ ನಗರದ ಟಿಳಕವಾಡಿ ಮತ್ತು ಶಹಾಪೂರ ಠಾಣೆಗಳ ವ್ಯಾಪ್ತಿಯಲ್ಲಿ ಒಂದೊಂದು ಮತ್ತು ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಮತ್ತು ಇನ್ನಿತರ ಕಡೆಗಳಲ್ಲಿ ಮೋಟರ್ ಸೈಕಲಗಳನ್ನು ಕಳ್ಳತನ ಮಾಡಿದ್ದರ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿತರಿಂದ ವಿವಿಧ ಕಂಪನಿಗಳಾದ ಯಮಹಾ, ಹಿರೋ ಸ್ಟೆಂಡರ್, ಟಿವಿಎಸ್, ಸುಜುಕಿ ಹೀಗೆ ಒಟ್ಟು ಸುಮಾರು 11,73,000 ಕಿಮ್ಮತ್ತಿನ ಒಟ್ಟು 20 ಮೋಟರ್ ಸೈಕಲಗಳನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.
ಈ ತನಿಖಾ ತಂಡದಲ್ಲಿಯ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ನಾಗನಗೌಡ ಕಟ್ಟಿಮನಿಗೌಡ್ರ ಪೊಲೀಸ್ ಇನ್ಸಪೆಕ್ಟರ್, ಶ್ರೀ ಸಂತೋಷ ದಳವಾಯಿ ಪಿಎಸ್‌ಐ, ಶ್ರೀ ಲಕ್ಕಪ್ಪ ಜೋಡಟ್ಟಿ ಪಿಎಸ್‌ಐ ಮತ್ತು ಸಿಬ್ಬಂದಿಗಳಾದ  ಸತೀಶ ನಾಯಕವಾಡ, ಶ್ರೀಕಾಂತ ಉಪ್ಪಾರ,ಬಾಳೇಶ ಪಡನಾಡ, ಸಣ್ಣಪ್ಪ ಹಂಚಿನಮನಿ, ಆನಂದ ಕೊಟಗಿ, ಶಿವಾನಂದ ವರ್ಚಗಲ್ಲ,  ಅಮೀತ ರೂಪನವರ ಸಿಪಿಸಿ 1946 ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಮೇಶ ಅಕ್ಕಿ, ಮಹಾದೇವ ಕಾಶಿದ, ದೀಪಕ ದೊಡಗೋಣಿ ಇವರು ಪ್ರಸಂಶನೀಯಯ ಕೆಲಸ ಮಾಡಿದ್ದು,  ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ಮಾನ್ಯ ಪೊಲೀಸ್ ಉಪ ಆಯುಕ್ತರು (ಕಾ&ಸು) ಮತ್ತು ಪೊಲೀಸ ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ) ಹಾಗೂ ಸಹಾಯಕ ಪೊಲೀಸ ಆಯುಕ್ತರು, ಬೆಳಗಾವಿ ಗ್ರಾಮೀಣ ಉಪವಿಭಾಗ ರವರು ಶ್ಲಾಘಿಸಿರುತ್ತಾರೆ.

 

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ