Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿ ಬೀಗರ ಮನೆಯ ಬೀಗ ಮುರಿದು ಚಿನ್ನ ಕದ್ದ ಕಸಾಯಿಗಲ್ಲಿ ಖದೀಮ..!

ಮಾಳ ಮಾರುತಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ.

ಬೀಗರ ಮನೆಯ ಬೀಗ ಮುರಿದು ಚಿನ್ನ ಕದ್ದ ಕಸಾಯಿಗಲ್ಲಿ ಖದೀಮ..!

ಸಂಬಂಧಿಕರಿಗೆ ಬರೋಬ್ಬರಿ 25 ಲಕ್ಷ ರೂ ಸುಣ್ಣ ಹಚ್ಚಲು ಮುಂದಾಗಿದ್ದ  ಸಾಟಿ ಸಾಬ್..!

ಮಾಳ ಮಾರುತಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ.

ಬೆಳಗಾವಿ : ನಗರದ ಅಮನ ನಗರ ಮತ್ತು ನ್ಯೂ ಗಾಂಧಿ ನಗರದಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿಯೇ ಬರೋಬ್ಬರಿ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕದ್ದ ಖದೀಮನೊಬ್ಬ ಮಾಳ ಮಾರುತಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಹಿಂಡಲಗಾ ಜೈಲು ಸೇರಿದ್ದಾನೆ. 

ನಗರದ ಕಸಾಯಿ ಗಲ್ಲಿಯ ಅಶ್ವಾಕ ಖಾಜಾಸಾಬ ಸಾಠಿ ವಯಸ್ಸು: 42 ವರ್ಷ ಸಾ: ಮನೆ ನಂ: 2692 ಬೆಳಗಾವಿ ಬಂಧಿತ ಕಳ್ಳ.

ಈತ ಬೀಗರು ಮನೆಯಲ್ಲಿ ಇಲ್ಲದಿರುವುದನ್ನು ತಿಳಿದುಕೊಂಡು ಅವರ ಮನೆ ಒಡೆದು ಮನೆಯಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮ.
ಈತ ಹೀಗೆ ಸುಮಾರು 25,35,000/-ರೂ ಕಿಮ್ಮತ್ತಿನ 169 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ. 

ಇತ್ತ ಚಿನ್ನಾಭರಣ ಕಳೆದುಕೊಂಡ ಮನೆಮಾಲೀಕರು ಕಂಗಾಲಾಗಿ  ಮಾಳ ಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಮಾಳ ಮಾರುತಿ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ 
ಇಷ್ಟೊಂದು ಮೌಲ್ಯದ ಚಿನ್ನಾಭರಣ ಕಳ್ಳತನ ಹಿಂದೆ ಇವರ ಸಂಬಂಧಿಕರೊಬ್ಬರ ಕೈವಾಡ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿ ಕಾರ್ಯಾಚರಣೆ ಆರಂಭಿಸಿದಾಗ ಇವರ ಸಂಬಂಧಿಕ ಕಸಾಯದಲ್ಲಿಯ ಅಶ್ಫಾಕ್ ಸಾಟಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕದ್ದಿರುವುದಾಗಿ ಒಪ್ಪಿದ್ದು, ಆತನಿಂದ ಕಳ್ಳತನ ಮಾಡಿದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ PSI ಗಳಾದ ಆನಂದ ಆದಗೊಂಡ, ಶ್ರೀಶೈಲ್ ಹುಳಗೇರಿ, ಉದಯ ಪಾಟೀಲ ಪಿ.ಎಮ್.ಮೋಹಿತೆ ಹಾಗೂ ಪ್ರೋಬೇಷನರಿ ಪಿ.ಎಸ್.ಐ. ರವರಾದ ಪ್ರಸನ್ನಕುಮಾರ, ಸಿದ್ದಾರ್ಥ ಮಾಳಮಾರುತಿ ಪೊಲೀಸ್ ಠಾಣೆ ಬೆಳಗಾವಿ ಮತ್ತು ಸಿಬ್ಬಂದಿಗಳಾದ ಬಸವರಾಜ ಬಸ್ತವಾಡ, ಅರುಣ ಕಾಂಬಳೆ, ಎಮ್.ಜಿ.ಕುರೇರ, ಜಗನ್ನಾಥ ಭೋಸಲೆ,  ಬಿ.ಎಮ್.ಕಲ್ಲಪ್ಪನವರ,  ಸಿ.ಜೆ.ಚಿನ್ನಪ್ಪಗೋಳ, ಸಿ.ಐ.ಚಿಗರಿ, ಕೆ.ಬಿ.ಗೌರಾಣಿ, ಮಹೇಶ ಒಡೆಯರ, ಮಲ್ಲಿಕಾರ್ಜುನ ಗಾಡವಿ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ ಅಕ್ಕಿ, ಮಹಾದೇವ ಕಾಸೀದ, ದೀಪಕ ದೊಡಗೋನಿ ಭಾಗಿಯಾಗಿದ್ದರು.  ಇವರ ಕಾರ್ಯಕ್ಕೆ  ಪೊಲೀಸ್ ಕಮಿಷನರ್, DCP, ACP ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕರೆ: ಪ್ರವೀಣ ಗುಡಿಜಗತ್ತಿನ ಆವಿಷ್ಕಾರದಲ್ಲಿ ನ್ಯಾನೋ ತಂತ್ರಜ್ಞಾನದ ಪಾತ್ರ ಅಪಾರ: ಕುಲಪತಿ ಸಿ. ಎಂ. ತ್ಯಾಗರಾಜ ಆಡಳಿತದಲ್ಲಿ ಇನ್ಮುಂದೆ 'ಬಂಗಾಳಿ' ಕಡ್ಡಾಯ: ಪಶ್ಚಿಮ ಬಂಗಾಳ ಸಿಎಂ ಸುವೇಂದು ಘೋಷಣೆಕೌಶಲ್ಯ ಅಭಿವೃದ್ಧಿ ಯುವಕರ ಭವಿಷ್ಯದ ಕೀಲಿ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಕಾರ್ಯ ಸ್ತುತ್ಯಾರ್ಹ : ಪ್ರೊ. ಹೊಸಕೋಟಿಬಿಸಿಸಿಐ ಚುನಾವಣೆ : ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆಒಡೆಸಾ ಬಂದರಿನಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ: ನಾಲ್ವರು ಭಾರತೀಯರು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರಸಿಜೆಪಿ ನಾಯಕರ ಜೊತೆ ಸೌಹಾರ್ದಯುತ ಮಾತುಕತೆ ಬಳಿಕ ಧರಣಿ ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರದ ಮನವಿನ್ಯಾನೋ ಜಾಥಾ-2026' ಕಾರ್ಯಕ್ರಮ