ಕಾಕತಿ ಪೊಲೀಸರಿಂದ ಮೂವರು ಗಾಂಜಾ ಮಾರಾಟಗಾರರ ಬಂಧನ..!
ಕೆಜಿಯಷ್ಟು ಗಾಂಜಾದೊಂದಿಗೆ ಸಿಕ್ಕಿಬಿದ್ದ ಮಾಳೆನಹಟ್ಟಿ ಭೂಷಣ್ & ಟೀಂ.
ಗಾಂಜಾ ದುಡ್ಡಿನಲ್ಲಿ ಅಪ್ರಾಪ್ತ ಬಾಲಕಿಯರಿಗೆ ಸ್ಕೆಚ್ ಹಾಕುತಿದ್ದ ಕಿರಾತಕ..?
ಬೆಳಗಾವಿ : ಹಲವು ದಿನಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಾರಿನಲ್ಲಿ ತಂದು ಗಾಂಜಾ ಮಾರುತ್ತಿದ್ದ ಮೂವರು ಖದೀಮ ಕಿರಾತಕರನ್ನು ಕಾಕತಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ತಾಲೂಕಿನ ಮಾಳೆನಹಟ್ಟಿ ಗ್ರಾಮದ 1. ಭೂಷಣ್ ಬಾಳೆಕುಂದ್ರಿ, 2.ಆದಿತ್ಯ ಮನೋಹರ್ ಕಾಂಬಳೆ ಅಂಬೇಡ್ಕರ್ ಗಲ್ಲಿ ಉಚಗಾವಿ, ಮಹಾರಾಷ್ಟ್ರದ 3.ಪ್ರಶಾಂತ್ ಲಕ್ಷ್ಮಣ್ ಕಾಂಡೇಕರ ಎಂಬಾತ ಬಂಧಿತ ಆರೋಪಿಗಳು.
ಕಾಕತಿ ಪಿಎಸ್ಐ ಮೃತ್ಯುಂಜಯ ಮಠದ ಹಾಗೂ ಸಿಬ್ಬಂದಿಗಳು ಈ ಕಿರಾತಕರ ಮೇಲೆ ಹಲವು ದಿನಗಳಿಂದ ಕಣ್ಣಿಟ್ಟು ಎರಡು ದಿನಗಳ ಹಿಂದೆ ಹೋನಗಾ ಗ್ರಾಮದ ರಸೋಯಿ ಡಾಬಾ ಸಮೀಪ ಗಾಂಜಾ ಮಾರುತ್ತಿರುವಾಗ ಕೆಜಿಯಷ್ಟು ಗಾಂಜಾ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 779 ಗ್ರಾಂ ಗಾಂಜಾ, 2 ಮೊಬೈಲ್ , ಹೋಂಡಾ ಸಿಟಿ ಕಾರ್ ಸೇರಿ ಒಟ್ಟು 3,61,000/- ಮೌಲ್ಯದ ವಾಹನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾಳೆನಟ್ಟಿಯ ಭೂಷಣ್ ಬಾಳೆಕುಂದ್ರಿ ಎಂಬ ಕಿರಾತಕ ಗಾಂಜಾ ಮಾರಿ ಬಂದ ದುಡ್ಡಿನಲ್ಲಿ ಅಪ್ರಾಪ್ತ ಬಾಲಕಿಯರಿಗೆ ಸ್ಕೆಚ್ ಹಾಕುತ್ತಿದ್ದ. ಅವರಿಗೆ ದುಬಾರಿ ಚಾಕ್ಲೇಟ್, ಗಿಫ್ಟಗಳನ್ನು ನೀಡಿ ಅವರೊಂದಿಗೆ ಸ್ನೇಹ ಬೆಳೆಸಿ ಚೆಲ್ಲಾಟವಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಕುರಿತು ಈ ಹಿಂದೆ ಕಾಕತಿ ಠಾಣೆಯಲ್ಲಿ ದೂರು ನೀಡಲಾಗಿತ್ತು, ಆದರೆ ಪ್ರಕರಣ ದಾಖಲಾಗಿರಲಿಲ್ಲ.
ಕಾಕತಿ ಪೊಲೀಸರ ಈ ಕಾರ್ಯಾಚರಣೆಗೆ ಬೆಳಗಾವಿ ಕಮಿಷನರ್ ಭೂಷನ್ ಬೋರಸೆ ಹಾಗೂ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.