ಬೆಳಗಾವಿ: ಕುಡಿದ ಮತ್ತಿನಲ್ಲಿ ಪತಿಮಹಾಶಯನೊಬ್ಬ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣಬರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಫಕೀರವ್ವ ಕಾಕಿ (36) ಕೊಲೆಯಾದ ಮಹಿಳೆ. ಯಲ್ಲಪ್ಪ ಪತ್ನಿಯನ್ನೇ ಕೊಂದ ಪತಿ. ಕಂಠಪೂರ್ತಿ ಕುಡಿದು ಬಂದಿದ್ದ ಪತಿ, ಪತ್ನಿ ಮಲಗಿದ್ದಾಗ ಸಲಾಕೆಯಿಂದ ಹೊಡೆದು ಆಕೆಯನ್ನು ಸಾಯಿಸಿದ್ದಾನೆ. ಮಕ್ಕಳ ಎದುರಲ್ಲೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಬಳಿಕ ಪರಾರಿಯಾಗಿದ್ದಾನೆ. ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.