Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅತ್ತೆ ಸಾಯಲೆಂದು ಹರಕೆ ಹೊತ್ತಳು ಸೊಸೆ

ಅತ್ತೆ - ಸೊಸೆ ನಡುವೆ ಅನ್ಯೋನ್ಯ ಸಂಬಂಧ ಇರುವುದು ಬಹಳ ವಿರಳ. ಹಲವರು ಅನ್ಯೋನ್ಯ ಇರುವಂತೆ ಸಮಾಜಕ್ಕೆ ತೋರಿಸಲು ಇನ್ನಿಲ್ಲದ ಕಷ್ಟಪಡುತ್ತಾರೆ. ಮನೆಯಿಂದ ಹೊರಗಡೆ ಮದುವೆ, ಪೂಜೆ ಎಂದಾಗ ಖುಷಿಯಿಂದ ಓಡಾಡುತ್ತಾರೆ. ಮನೆಯೊಳಗೆ ಮಾತ್ರ ಇಬ್ಬರೂ ಉತ್ತರ-ದಕ್ಷಿಣ. ಒಬ್ಬರನ್ನು ಕಂಡ್ರೆ ಇನ್ನೊಬ್ಬರಿಗಾಗಲ್ಲ. ಆದರೆ, ಅತ್ತೆ ಸಾಯಬೇಕು ಎಂದು ಸೊಸೆ ದೇವರಿಗೇ ಮೊರೆಹೋದ ಪ್ರಸಂಗ ನೀವೆಲ್ಲಿಯಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ!? ಇಲ್ಲೊಂದು ಅಂಥದ್ದೊಂದು ಪ್ರಕರಣ ನಡೆದಿದೆ.

ಹರಕೆ ಅನ್ನೋದು ಜನಪದ ಆಚರಣೆಗಳಲ್ಲೊಂದು. ಪ್ರಪಂಚಾದ್ಯಂತ ಹಿಂದಿನಿಂದಲೂ ದೇವತೆಗಳಿಗೆ ಅಥವಾ ತಮ್ಮ ಆರಾಧನಾ ದೈವ ಶಕ್ತಿಗಳಿಗೆ ಹರಕೆ ಅರ್ಪಿಸುವುದು ರೂಢಿಯಲ್ಲಿದೆ.
ಮನೆಯಲ್ಲಿ ಯಾರಿಗಾದರು ಕೇಡಾದರೆ, ಕಾಯಿಲೆಯಾದರೆ ಬಂದಿರುವ ಎಡರನ್ನೂ ರೋಗವನ್ನೂ ನಿವಾರಿಸಿದರೆ ಮನೆದೇವರಿಗೆ ಬಲಿಕೊಡುತ್ತೇನೆ, ಅಭಿಷೇಕ ಮಾಡಿಸುತ್ತೇನೆ, ತೀರ್ಥಯಾತ್ರೆ ಮಾಡುತ್ತೇನೆ ಎಂದು ಮೊದಲಾಗಿ ತಮ್ಮ ಶಕ್ತ್ಯನುಸಾರ ಮನೆಯ ಯಜಮಾನ ಇಲ್ಲವೆ ಯಜಮಾನಿ ರೋಗಿಯ ಪರವಾಗಿ ಹರಕೆ ಮಾಡಿಕೊಳ್ಳುತ್ತಾರೆ. ವಿರಳವಾಗಿ ತಮ್ಮ ಇಷ್ಟಹರಕೆ ಮಾಡಿಕೊಳ್ಳುವುದೂ ಉಂಟು. ಹರಕೆ ಕಟ್ಟಿಕೊಂಡ ವ್ಯಕ್ತಿ ಕಷ್ಟಗಳು ಬಯಲಾದಾಗ ತಾನು ಹರಕೆ ಹೊತ್ತ ದೇವರ ಹಬ್ಬದ ದಿನ ಹರಕೆ ತೀರಿಸುತ್ತಾನೆ.
ಆದರೆ, ಇದೊಂದು ವಿಚಿತ್ರ ಮತ್ತು ವಿಲಕ್ಷಣ ಹರಕೆ...! ಕೇಳುವಾಗಲೇ ಅಚ್ಚರಿಯಾಗುತ್ತದೆ. ಆದರೆ, ಸದ್ಯ ಇಂತಹದ್ದೊಂದು ಹರಕೆ ವೈರಲ್ ಆಗುತ್ತಿದೆ.
ತನ್ನ ಅತ್ತೆ ಸಾಯಬೇಕು ಎಂದು ಇಲ್ಲೊಬ್ಬ ಸೊಸೆ ಹರಕೆ ಹೊತ್ತಿದ್ದಾಳೆ. ೫೦ ರೂ. ಮೌಲ್ಯದ ನೋಟಿನಲ್ಲಿ 'ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ' ಎಂದು ಸೊಸೆಯೊಬ್ಬಳು ಬರೆದು ದೇವರ ಹುಂಡಿಗೆ ಹಾಕಿದ್ದಾಳೆ. ಆ ನೋಟು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಡೆದದ್ದು ಎಲ್ಲಿ ?

ಹೀಗಂತ 50 ರೂಪಾಯಿ ನೋಟಿನ ಮೇಲೆ ಬರೆದು ದೇವರ ಹುಂಡಿಗೆ ಕಾಣಿಕೆ ಹಾಕಿದ್ದಾಳೆ ಈ ಸೊಸೆ ಮಹಾಶಯಳು.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ಶ್ರೀ ಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ಸೊಸೆ ಹಾಕಿದ ಕಾಣಿಕೆಯ 50 ರೂ. ನ ಈ ನೋಟು ಸಿಕ್ಕಿದೆ.

ಬೇಡಿದ ವರ ಕೊಡುವ ಶ್ರೀಕ್ಷೇತ್ರ ದತ್ತಾತ್ರೇಯನ ಹುಂಡಿಯಲ್ಲಿ ಇಂಥ ವಿಕೃತ ಹರಕೆ ಹೊತ್ತು ಹಾಕಿದ ಕಾಣಿಕೆಯ ನೋಟು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಕಳೆದ ಕೆಲ ದಿನಗಳ ಹಿಂದೆ ದೇವಲಗಾಣಗಾಪುರ ದತ್ತನಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಹುಂಡಿ ಎಣಿಕೆ ಕಾರ್ಯದಲ್ಲಿ 50 ರೂಪಾಯಿ ಮುಖ ಬೆಲೆಯ ಈ ನೋಟು ಪತ್ತೆಯಾಗಿತ್ತು. ಆ ನೋಟಿನ ಮೇಲೆ ಅತ್ತೆ ಬೇಗ ಸಾಯಲಿ ಎಂದು ಬರೆದು ಹರಕೆ ಹೊತ್ತಿದ್ದು ಇದೀಗ ವೈರಲ್ ಆಗಿದೆ.

 

 
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ