ಕಕ್ಕೇರಿ:
ಸ್ಥಳೀಯ ನಿವಾಸಿ ಮಲ್ಲಯ್ಯ ದುಂಡಯ್ಯ ಹಿರೇಮಠ (52) ಪ್ರಗತಿಪರ ರೈತರಾಗಿದ್ದು, ದಿನನಿತ್ಯದಂತೆ ಹೊಲಕ್ಕೆ ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೋದ ಸಂದರ್ಭದಲ್ಲಿ ಸ್ವಂತ ಭೂಮಿಯಲ್ಲಿ ಕೃಷಿ ಹೊಂಡದ ಹತ್ತಿರ ಕಸ ಬೆಳೆದಿದ್ದನ್ನು ತೆಗೆಯುವ ವೇಳೆ ಕಾಲು ಜಾರಿ ಬಿದ್ದು ಈಜಲು ಬಾರದ ಕಾರಣ ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಮೃತರಿಗೆ ಪತ್ನಿ, ಮಗಳು ಮಗ ಇದ್ದಾರೆ. ಸಂಪೂರ್ಣ ಕುಟುಂಬದ ಜವಾಬ್ದಾರಿ ಹಾಗೂ ಸರ್ಕಾರಿ ಬ್ಯಾಂಕಿನಲ್ಲಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬೆಳೆ ಸಾಲವನ್ನು ಲಕ್ಷಾಂತರ ರೂಪಾಯಿ ಸಾಲು ಮಾಡಿದ್ದು, ನಿರ್ವಹಣೆ ಮಲ್ಲಯ್ಯ ರೈತಾಪಿ ಬೇಸಾಯದ ಮೇಲೆ ಅವಲಂಬಿತವಾಗಿರುವ ಕುಟುಂಬಸ್ಥರಾಗಿದ್ದಾರೆ. ತಂದೆಯನ್ನು ಕಳೆದುಕೊಂಡು ಅನಾಥ ಆಗಿರುವ ಈ ಕುಟುಂಬಸ್ಥರ ಜೀವನ ಈಗ ಕಷ್ಟದಾಯಕವಾಗಿದೆ. ಕುಟುಂಬಸ್ಥರು ಕಳೆದುಕೊಂಡು ದುಃಖದಲ್ಲಿ .
ದುರ್ದೈವ ಸಾವು ಬದುಕಿನ ನಡುವೆ ಜುಲೈ 21 ರೈತ ಹುತಾತ್ಮ ದಿನಾಚರಣೆ ದಿನದಂದು . ಈ ಒಂದು ರೈತನ ಸಾವು ಮರೆಯಲು ಸಾಧ್ಯವಿಲ್ಲ. ರೈತ ಮುಖಂಡರು ಯಲ್ಲಪ್ಪ ಗುಪಿತ, ರಮೇಶ ವೀರಾಪುರ, ಅಷ್ಪಕ್ಅಹ್ಮದ ಪಟೇಲ್, ಮಹಾಂತಯ್ಯ ಹಿರೇಮಠ, ಚೆನ್ನವೀರಯ್ಯಾ ಹಿರೇಮಠ , ಅಲೆಗ್ಸಾಂಡರ್ ಡಿಸೋಜಾ , ಮಾರುತಿ ಪಾಟೀಲ, ಯಲ್ಲೇಶಿ ಕುಂಬಾರಕೊಪ, ಶಿವಾಜಿ ಅಂಬಡಗಟ್ಟಿ, ಯಲ್ಲಪ್ಪ ಚನ್ನಾಪುರ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ದುಃಖದಲ್ಲಿ ಮುಳುಗಿರುವ ಕುಟುಂಬಸ್ಥರಲ್ಲಿ ಪಾಲ್ಗೊಂಡು ರೈತ ಕೃಷಿ ಹೊಂಡದಲ್ಲಿ ಜಾರಿ ಬಿದ್ದು ಸಾವು ಸಂಭವಿಸಿದ್ದರಿಂದ ಸರ್ಕಾರಕ್ಕೆ ಮನವಿ ಮಾಡಿ ಒತ್ತಾಯಿಸಿ ಪರಿಹಾರ ಕೊಡಿಸುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದರು.
ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಠಾಣೆಯ ಪಿ. ಐ. ರವಿಕುಮಾರ್ ಧರ್ಮಟ್ಟಿ, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.