Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿದ್ಯಾರ್ಥಿಗಳು  ಎನ್ ಸಿಸಿ   ಮಹತ್ವ ಮತ್ತು ಅದರ ಉಪಯೋಗ ಹಾಗೂ ಅನುಕೂಲಗಳ  ಮಾಹಿತಿ ಪಡೆಯಬೇಕು: ಪ್ರೊ . ಹನುಮಂತ ಬನ್ನೂರ

ಬೆಳಗಾವಿ: ನಗರದ ಕೆಎಲ್ಇ. ಸಂಸ್ಥೆಯ, ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಮಂಗಳವಾರ  22-07-2026 ರಂದು ಬೆಳಗ್ಗೆ 10:30 ಕ್ಕೆ 2026- 27ನೇ ಸಾಲಿನ  ಬಿ ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ   ಸ್ವಾಗತ  ಹಾಗೂ ದೀಕ್ಷಾರಂಭ ಮೂರನೆಯ ದಿನದ ಕಾರ್ಯಕ್ರಮ ಆಯೋಜಿಸಲಾಗಿತ್ತು .

ಆರ್ ಎಲ್ ಎಸ್ ಮಹಾವಿದ್ಯಾಲಯದ ವಾಯುದಳದ ಮುಖ್ಯಸ್ಥ ಪ್ರೊ.ಹನುಮಂತ  ಬನ್ನೂರ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಯುವಕರು  ದೇಶದ ಆಸ್ತಿಯಾಗಿದ್ದಾರೆ.  ದೇಶದ ಭಾವೈಕ್ಯತೆಯ ಸಂಕೇತಯಾದವರು . ಕೆಡೆಟ್ ಗಳು ಶಿಸ್ತು ಸಂಯಮ  ಬೆಳೆಸಿಕೊಳ್ಳಬೇಕು. ದೇಶವು ಬಲಿಷ್ಠ ವಾಗಬೇಕಾದರೆ  ಮೂರು  ದಳಗಳ ಕೆಡೆಟ್  ಸಾಮರ್ಥ್ಯದಿಂದ ಇರಬೇಕು. ದೇಶದ ಪರಿಚಯ ಮಾಡಿಕೊಳ್ಳಬೇಕು. ಎನ್ ಸಿಸಿ ಕೆಡೆಟ್ ಗಳು ವಿವಿಧ ಕೌಶಲ್ಯಗಳ ತರಬೇತಿ , ಹಾಗೂ 
ಏರೋ ಮಾಡೆಲಿಂಗ್ ಮತ್ತು ಡ್ರೋನ ತರಬೇತಿ ಪಡೆಯಬೇಕು .ವಾಯುದಳ ಕಲಿಕೆ ಮೂಲಭೂತ  ಅಂಶಗಳನ್ನು ತಿಳಿದು ಕೊಳ್ಳಬೇಕು.ರಾಜ್ಯ ಮತ್ತು ರಾಷ್ಟ್ರದ ಕಾರ್ಯಾಗಾರಗಳಲ್ಲಿ ಭಾಗವಹಿಸಬೇಕು . ದೇಶ ನಿರ್ಮಾಣಕ್ಕೆ ಎನ್ ಸಿ ಸಿ ವು ಪ್ರಮುಖ ಪಾತ್ರ ವಹಿಸುತ್ತದೆಂದು ಕರೆ ನೀಡಿದರು.
   
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ  ಪ್ರಾಚಾರ್ಯೆ ಡಾ.  ಜ್ಯೋತಿ ಕವಳೇಕರ ಮಾತನಾಡಿ, 
ಕಾಲೇಜನಲ್ಲಿ ಜರಗುವ ಎಲ್ಲಾ ಕಾರ್ಯಕ್ರಮಗಳಲ್ಲಿ  ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಸಮಾಜದಲ್ಲಿ  ನಡೆಯುವ  ಜಾಗೃತಿ ಜಾಥಾಗಳಲ್ಲಿ ಭಾಗವಹಿಸಿ ಜನತೆಯಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಬೇಕೆಂದು ಕರೆ ನೀಡಿದರು
  
ಸ್ನೇಹಾ  ಪ್ರಾರ್ಥಿಸಿದರು. ಪ್ರೊ .ದಾನಮ್ಮ  ಶೆಟ್ಟರ  ಸ್ವಾಗತಿಸಿದರು. ಡಾ  ದಿನೇಶ ಪಾಟೀಲ ಪರಿಚಯಿಸಿದರು.  ಡಾ. ಮಹಾನಂದ ಪುರಾಣಿಕ ವಂದಿಸಿದರು, ಪ್ರೊ.ಸೋನಂ ಪೊರವಾಲ್ ನಿರೂಪಿಸಿದರು.

ಸಮಾರಂಭದಲ್ಲಿ ಮಹಾವಿದ್ಯಾಲಯದ ಎಲ್ಲಾ ಸಿಬ್ಬಂದಿಯವರು ಹಾಗೂ ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
RCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರು