ಬೆಳಗಾವಿ: ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದ ಲಿಂಗಾಯತ ಮಾಳಿ ಸಮಾಜದ ಹೊಸಮನಿ ಕುಟುಂಬದ ಸಹೋದರಿಯರು ಇತ್ತೀಚಿಗೆ ನಡೆದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪುಂಡಲಿಕ ಹೊಸಮನಿ ಅವರ ಪುತ್ರಿಯರಾದ ಭಾಗ್ಯಾ 604 ಮತ್ತು ಸ್ವಾತಿ
516 ಅಂಕ ಪಡೆದು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ.
ಕವಿ-ಸಾಹಿತಿ ಪ್ರಕಾಶ ಕೋಟಿನತೋಟ, ಮಾಳಿ ಸಮಾಜದ ಅಧ್ಯಕ್ಷ ನೀಲಪ್ಪ ಕೇವಜಿ, ಶಂಕರ ಚಚಡಿ, ಬಿ.ಬಿ. ಹೊಸಮನಿ,ಅಶೋಕ ಹೊಸಮನಿ ಮುಂತಾದವರು ಅಭಿನಂದಿಸಿದ್ದಾರೆ.