Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

IPL ಫೈನಲ್ ಗೆ ಲಗ್ಗೆ ಇಟ್ಟ ನಮ್ಮ RCB

ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ಐಪಿಎಲ್‌ನ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ. ಹಾಲಿ ಚಾಂಪಿಯಬ್ ಆಗಿರುವ ಬೆಂಗಳೂರು ಈ ಬಾರಿ ಚಾಂಪಿಯನ್ ಗೆ ತಕ್ಕ ಆಟವಾಡಿ ಸತತವಾಗಿ 92 ರನ್ ಗಳ ಬಹುದೊಡ್ಡ ಅಂತರದಲ್ಲಿ ಗೆದ್ದು ಫೈನಲ್ ತಲುಪಿದೆ.

ಬೆಂಗಳೂರು ತಂಡ 254 ರನ್‌ಗಳ ಬೃಹತ್ ಮೊತ್ತ ಕಲೆ ಹಾಕುವ ಮೂಲಕ ಗುಜರಾತ್ ಟೈಟನ್ಸ್‌ಗೆ 255 ರನ್‌ಗಳ ಗುರಿ ನೀಡಿತ್ತು.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿತ್ತು. ಆರಂಭಿಕ ವೆಂಕಟೇಶ್‌ ಅಯ್ಯರ್ 19 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ವಿರಾಟ್ ಕೊಹ್ಲಿ 43 ರನ್ ಸಿಡಿಸಿದರು. ನಂತರ ಅಬ್ಬರಿಸಿದ ನಾಯಕ ರಜತ್ ಪಾಟಿದಾರ್ 33 ಎಸೆತಗಳಲ್ಲಿ ಅಮೋಘ 9 ಸಿಕ್ಸರ್, 5 ಬೌಂಡರಿಗಳ ಸಹಿತೆ 93 ರನ್ ಸಿಡಿಸಿ ಅಜೇಯರಾಗಿಳಿದರು. ನಾಯಕನ ಆಟ ಆಡಿದ ಪಾಟಿದಾ‌ರ್ ಗುಜರಾತ್ ಬೌಲರ್‌ಗಳನ್ನು ಅಕ್ಷರಶಃ ಕಂಗೆಡಿಸಿದರು. ದೇವದತ್ತ ಪಡಿಕ್ಕಲ್ 30, ಕೃಣಾಲ್ ಪಾಂಡ್ಯ 43 ಮತ್ತು ಜಿತೇಶ್ ಶರ್ಮಾ 15 ರನ್ ಸಿಡಿಸುವ ಮೂಲಕ ಉಪಯುಕ್ತ ಕಾಣಿಕೆ ನೀಡಿದರು.

ಅಂತಿಮವಾಗಿ 20 ಓವರ್ ಅಂತ್ಯಕ್ಕೆ ಆರ್‌ಸಿಬಿ 5 ವಿಕೆಟ್ ಕಳೆದುಕೊಂಡು 254 ರನ್ ಕಲೆ ಹಾಕಿತು.

ಅಂಕಪಟ್ಟಿಯಲ್ಲಿ ತಲಾ 18 ಅಂಕಗಳೊಂದಿಗೆ ಮೊದಲೆರಡು ಸ್ಥಾನಗಳನ್ನು ಹೊಂದಿರುವ ಇತ್ತಂಡಗಳ ಪೈಕಿ ಗೆದ್ದ ತಂಡ ಫೈನಲ್‌ಗೆ ನೇರ ಲಗ್ಗೆ ಇಡುತ್ತದೆ. ಅದರಂತೆ ಬೆಂಗಳೂರು ಗೆದ್ದು ಫೈನಲ್ ತಲುಪಿದೆ. ಸೋತ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಸೆಣಸಿ ಫೈನಲ್‌ಗೇರುವ ಮತ್ತೊಂದು ಅವಕಾಶ ಪಡೆದಿದೆ.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
IPL ಫೈನಲ್ ಗೆ ಲಗ್ಗೆ ಇಟ್ಟ ನಮ್ಮ RCBಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಠರಾವ್ ಅಂಗೀಕರಿಸದೆ ಇದ್ದಲ್ಲಿ ಕರ್ನಾಟಕ ಬಂದ್ ಎಚ್ಚರಿಕೆ ನೀಡಿದ ವಾಟಾಳ ನಾಗರಾಜಅತಿದೊಡ್ಡ ಸೈಬರ್‌ ವಂಚನೆ : ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಶಿಕ್ಷಕಿಗೆ ‘ಡಿಜಿಟಲ್ ಅರೆಸ್ಟ್’; 24 ಕೋಟಿ ರೂ. ಲೂಟಿ..!ಕಗ್ಗತ್ತಲಿನಲ್ಲಿ ಭಾರತ-ಪಾಕ್‌ ಗಡಿಯಲ್ಲಿ ʼಹೊಳೆಯುವ ಬೆಳಕಿನ ರೇಖೆʼ : ವಿಮಾನದಿಂದ ಪೈಲಟ್ ಸೆರೆಹಿಡಿದ ಅಪರೂಪದ ದೃಶ್ಯ !ಮಂಗಲದೀಪ ವಿಹಾರ ಧಾಮದಲ್ಲಿ ಯಶಸ್ವಿ ಸಾವಯವ ಕೃಷಿ ಕಾರ್ಯಗಾರ"ಇಸ್ಲಾಂಪುರ’ ಈಗ ‘ಕೃಷ್ಣ ನಗರ’, ರೆಹಮಾನ್‌ ಗಲ್ಲಿ ಈಗ ʼರಾಮ್‌ʼ ಗಲ್ಲಿ : ಪಾಕಿಸ್ತಾನವು ಲಾಹೋರ್‌ ಬೀದಿಗಳ ಹೆಸರು ಯಾಕೆ ಬದಲಾಯಿಸುತ್ತಿದೆ ?ಅತ್ಯಾಚಾರ ಆರೋಪಿಗೆ ಭವ್ಯ ಸ್ವಾಗತ: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ರಸ್ತೆಯಲ್ಲಿ ಮೆರವಣಿಗೆಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್-ಏಕದಿನ ಸರಣಿಗೆ ಭಾರತ ತಂಡ ಪ್ರಕಟ ; ಶುಭಮನ್‌ ಗಿಲ್ ಸಾರಥ್ಯಕೃಷಿಹೊಂಡಕ್ಕೆ ಕಾಲು ಜಾರಿ ಬಿದ್ದು ಬಾಲಕಿಯರಿಬ್ಬರು ಸಾವುಯುವಶಕ್ತಿಗೆ ಗಾಂಧಿ ಚಿಂತನೆಗಳೇ ಬಲ : ಯುವ ಜನತೆಗೆ ಗಾಂಧೀಜಿಯವರ ಮೌಲ್ಯಗಳು" ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶಿವಾಜಿ ಕಾಗಣೇಕರ ಯುವಕರಿಗೆ ಕರೆ