Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನೀರು ನುಗ್ಗಿ ಹಾವು ಸಾಕಣೆ ಕೇಂದ್ರಗಳಿಂದ ತಪ್ಪಿಸಿಕೊಂಡ 900ಕ್ಕೂ ಹೆಚ್ಚು ಹಾವುಗಳು ; ಕಚ್ಚಿದ್ದಕ್ಕೆ ಮಹಿಳೆ ಸಾವು, ಹಲವರಿಗೆ ಕಡಿತ

ಬೀಜಿಂಗ್: ಚೀನಾದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಭೀಕರ ಪ್ರವಾಹದ ನಡುವೆಯೇ, ದೇಶದ ಗುಾಂಗ್ಸಿ (Guangxi) ಪ್ರದೇಶದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆ ನಡೆದಿದೆ. ಪ್ರವಾಹದ ನೀರು ಹಾವು ಸಾಕಾಣಿಕೆ ಕೇಂದ್ರಗಳಿಗೆ ನುಗ್ಗಿದ ಪರಿಣಾಮ ನೂರಾರು ಹಾವುಗಳು ತಪ್ಪಿಸಿಕೊಂಡಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಬ್ಲೂಮ್‌ಬರ್ಗ್ ವರದಿ ಹಾಗೂ ಚೀನಾದ ಸರ್ಕಾರಿ ಪ್ರಸಾರ ಸಂಸ್ಥೆ ಸಿಸಿಟಿವಿ (CCTV) ನೀಡಿರುವ ಮಾಹಿತಿಯ ಪ್ರಕಾರ, ಗುಾಂಗ್ಸಿಯಲ್ಲಿ ಉಂಟಾದ ಪ್ರವಾಹದಿಂದ ಹಲವು ಹಾವು ಸಾಕಾಣಿಕೆ ಕೇಂದ್ರಗಳು ಜಲಾವೃತಗೊಂಡಿವೆ. ಇದರಿಂದ ನೂರಾರು ಹಾವುಗಳು ಹೊರಬಂದಿದ್ದು, ಗ್ಲೋಬಲ್ ಟೈಮ್ಸ್ ಸೇರಿದಂತೆ ಚೀನಾದ ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ಕನಿಷ್ಠ 900 ಹಾವುಗಳು ಈಗಾಗಲೇ ತಪ್ಪಿಸಿಕೊಂಡಿವೆ.
ಈ ಬೆಳವಣಿಗೆಯ ನಡುವೆ, ಗುಾಂಗ್ಸಿಯ ಹೆಂಗ್‌ಝೌ (Hengzhou) ನಗರದಲ್ಲಿ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಪ್ರವಾಹದ ನೀರಿನಲ್ಲಿ ನೂರಾರು ಹಾವುಗಳು ಈಜುತ್ತಾ ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತೊಡೆಯಷ್ಟು ಎತ್ತರದ ನೀರಿನಲ್ಲಿ ಜನರು ಇಳಿದು ವೇಗವಾಗಿ ಚಲಿಸುತ್ತಿರುವ ಹಾವುಗಳನ್ನು ಹಿಡಿಯಲು ಹರಸಾಹಸ ಪಡುತ್ತಿರುವ ವಿಡಿಯೊಗಳು ವ್ಯಾಪಕವಾಗಿ ಹರಿದಾಡುತ್ತಿವೆ.
ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ, ತಪ್ಪಿಸಿಕೊಂಡಿರುವ ಹಾವುಗಳಲ್ಲಿ ನಾಗರಹಾವು (ಕೋಬ್ರಾ) ಸೇರಿದಂತೆ ಅತ್ಯಂತ ವಿಷಕಾರಿ ಜಾತಿಗಳೂ ಸೇರಿವೆ. ಹೀಗಾಗಿ ಹಾವುಗಳನ್ನು ಸುರಕ್ಷಿತವಾಗಿ ಹಿಡಿಯಲು ವಿಶೇಷ ತಂಡಗಳನ್ನು ನಿಯೋಜಿಸಿರುವ ಅಧಿಕಾರಿಗಳು, ಹಾವು ಕಚ್ಚಿದವರಿಗೆ ತಕ್ಷಣ ಚಿಕಿತ್ಸೆ ಒದಗಿಸಲು ತಾತ್ಕಾಲಿಕ ವೈದ್ಯಕೀಯ ಚಿಕಿತ್ಸಾ ಕೇಂದ್ರಗಳನ್ನೂ ಸ್ಥಾಪಿಸಿದ್ದಾರೆ.

ಗುಾಂಗ್ಸಿ ಪ್ರದೇಶವು ಚೀನಾದ ವಾಣಿಜ್ಯ ಹಾವು ಸಾಕಾಣಿಕೆಯ ಅತಿದೊಡ್ಡ ಕೇಂದ್ರವಾಗಿದೆ. ಇಲ್ಲಿ ಸುಮಾರು 3 ಕೋಟಿ (30 ಮಿಲಿಯನ್) ಹಾವುಗಳನ್ನು ಸಾಂಪ್ರದಾಯಿಕ ಔಷಧ ತಯಾರಿಕೆ, ಚರ್ಮದ ಉತ್ಪನ್ನಗಳು ಹಾಗೂ ಮಾಂಸ ಉತ್ಪಾದನೆಗಾಗಿ ಸಾಕಲಾಗುತ್ತದೆ.
ಪ್ರಾದೇಶಿಕ ಆಡಳಿತವು ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಹೆಂಗ್‌ಝೌ ವ್ಯಾಪ್ತಿಯ ಹಲವು ಗ್ರಾಮಗಳು ಪ್ರವಾಹದಲ್ಲಿ ಮುಳುಗಿದ ಬಳಿಕ “ಕೆಲವು ಜಲಾವೃತ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಂಡಿವೆ” ಎಂದು ಎಚ್ಚರಿಕೆ ನೀಡಿದೆ.
ಗುಾಂಗ್ಸಿಯಲ್ಲಿ ಸುರಿದ ಭಾರೀ ಮಳೆಯಿಂದ ಅಣೆಕಟ್ಟುಗಳು ಹಾಗೂ ಜಲಾಶಯಗಳು ಉಕ್ಕಿ ಹರಿದು, ಹಲವು ಪಟ್ಟಣಗಳು ಮತ್ತು ನಗರಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಈ ಪ್ರಕೃತಿ ವಿಕೋಪದಲ್ಲಿ ಇದುವರೆಗೆ ಆರು ಮಂದಿ ಮೃತಪಟ್ಟಿದ್ದು, ಸುಮಾರು 1.30 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ 8,000ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸುಮಾರು 5,700 ದೋಣಿಗಳನ್ನು ನಿಯೋಜಿಸಲಾಗಿದೆ ಎಂದು ಗುಾಂಗ್ಸಿ ಪ್ರಾದೇಶಿಕ ಪ್ರಚಾರ ಕಚೇರಿ ತಿಳಿಸಿದೆ.
ಇದರ ಜೊತೆಗೆ, ಪ್ರವಾಹದ ಹೊಡೆತಕ್ಕೆ ಗುಾಂಗ್ಸಿಯ ಮೃಗಾಲಯವೊಂದರ ಪ್ರಾಣಿಗಳ ಆವರಣಗಳು ಹಾನಿಗೊಳಗಾದ ಪರಿಣಾಮ ಅಲ್ಪಾಕಾಗಳು, ಮಿನಿಯೇಚರ್ ಹಂದಿಗಳು, ಜೀಬ್ರಾಗಳು ಸೇರಿದಂತೆ ಕನಿಷ್ಠ 100 ಪ್ರಾಣಿಗಳು ಮೃಗಾಲಯದಿಂದ ತಪ್ಪಿಸಿಕೊಂಡಿರುವುದಾಗಿ ವರದಿಯಾಗಿದೆ.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!