ಚನ್ನಮ್ಮನ ಕಿತ್ತೂರು: ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ನ್ಯಾಯಾಲಯವು ಖಡಕ್ ಸಂದೇಶ ರವಾನಿಸಿದೆ. ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ಕೊಟ್ಟ ತಂದೆಗೆ ಇಲ್ಲಿನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಹಮ್ಮದಲಿ ನಾಯಕ್ ಅವರು 25,000 ಭಾರಿ ದಂಡ ವಿಧಿಸಿ ಬುಧವಾರ (ಜು.10) ಮಹತ್ವದ ಆದೇಶ ಹೊರಡಿಸಿದ್ದಾರೆ.
ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ನಿವಾಸಿ ನಜೀರಸಾಬ್ ಅತ್ತಾರ ಎಂಬುವವರೇ ದಂಡನೆಗೆ ಒಳಗಾದ ತಂದೆ. ಅಪ್ರಾಪ್ತರಿಗೆ ದ್ವಿಚಕ್ರ ವಾಹನ ಚಲಾಯಿಸಲು ಕೊಡುವುದು ಕಾನೂನುಬಾಹಿರ ಮತ್ತು ಅಪಾಯಕಾರಿ ಎಂದು ತಿಳಿದಿದ್ದರೂ, ನಿಯಮ ಉಲ್ಲಂಘಿಸಿ ಮಗನ ಕೈಗೆ ಕೀಲಿ ಕೈ ನೀಡಿದ್ದಕ್ಕಾಗಿ ಕೋರ್ಟ್ ಈ ಕ್ರಮ ಜರುಗಿಸಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.