Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅರಣ್ಯ ವಾಹನ ದುರ್ಬಳಕೆ; ಗಿಡ ಕಡಿತ, ಇನ್ನೂ ಕ್ರಮ‌ ಬಾಕಿ..!! ಜಾರಿಕೊಳ್ಳುವ ಡಿಸಿಎಫ್...!?

Advertisement
ಜನ ಜೀವಾಳ ಜಾಲ : ಬೆಳಗಾವಿ:ಅರಣ್ಯ ಇಲಾಖೆಯ ಜೀಪ್ ದುರುಪಯೋಗ ಮಾಡಿಕೊಂಡು ಗಿಡ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿಕೊಳ್ಳುವ ರೀತಿಯಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಎಫ್ ಎಸ್. ಕೆ. ಕಲ್ಲೋಳಿಕರ ವಾರದ ನಂತರ ತಿಳಿಸಿದ್ದಾರೆ.

ಘಟನೆ ನಡೆದು ವಾರ ಕಳೆಯುತ್ತ ಬಂದಿದ್ದು ಈಗ ಡಿ.ಎಫ್.ಓ ಇನ್ನೂ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಸ್ಕ್ವಾಡ್ ವಿಭಾಗದ ವಲಯ ಅರಣ್ಯಾಧಿಕಾರಿ ವಾಹನ ಚಲಾಯಿಸುತ್ತಿರುವ ಚಾಲಕ ರವಿ ಎಂಬಾತ ಮಹಾಂತೇಷ ನಗರ ಬಳಿ ಪ್ರಾರ್ಥನಾ ಮಂದಿರ ಒಂದರ ಆವರಣದಲ್ಲಿ ಗಿಡ ಕಡಿಯುವ ದೃಶ್ಯ ಹೊರಗೆ ಬಿದ್ದಿತ್ತು.
ಅರಣ್ಯ ಇಲಾಖೆಯ ವಾಹನ ಕಾಣುವಂತೆ ನಿಲ್ಲಿಸಿ ಅಕ್ರಮವಾಗಿ ಗಿಡ ಕಡಿದ ಆರೋಪ ಮೊಬೈಲ್ ದೃಶ್ಯಗಳ ಮೂಲಕ ಪರಿಸರವಾದಿಗಳು ಜನ ಜೀವಾಳ ಕ್ಕೆ ತಿಳಿಸಿದ್ದರು.
ಸರಕಾರಿ ವಾಹನ ದುರ್ಬಳಕೆ ಮತ್ತು ಗಿಡ ಕಡಿದ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಚಕ್ಷಣಾ ವಿಭಾಗದ ವಲಯ ಅರಣ್ಯಾಧಿಕಾರಿ ನೇಹಾ ತೋರಗಲ್, ಪ್ರಕರಣದ ಸಂಬಂಧ ಚಾಲಕನಿಗೆ ನೊಟೀಸ್ ಕೊಡಲಾಗಿದೆ. ಮೇಲಾಧಿಕಾರಿಗಳು ಸೂಕ್ತ ಕ್ರಮ‌ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಬೇಲೆಯೇ ಹೊಲ ಮೇಯುತ್ತಿರುವ ಪ್ರಕರಣಕ್ಕೆ ಮೇಲಧಿಕಾರಿಗಳು ಜಾಣ ಮೌನ ವಹಿಸುತ್ತಿರುವುದು ಗಮನ ಸೆಳೆದಿದೆ. ನಿವೃತ್ತಿ ಅಂಚಿನ ದಿನಗಳನ್ನು ದೂಡುತ್ತಿರುವ ಡಿಸಿಎಫ್ ಶಂಕರ ಕಲ್ಲೋಳಿಕರ ಅವರ ಅಸಹಾಯಕತೆ ಗಮನಿಸಬಹುದು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸಿಎಂ ಆದ ನಂತರ ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ‌ ಕೊಡ್ತೇನೆ ಅಂದ್ದಿದ್ದು ನಿಜ, ಆದರೆ…: ಸಿಎಂ ಡಿಕೆ ಶಿವಕುಮಾರ್ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ  ಗುಡುಗುಡಿಕೆಶಿ ಸಂಪುಟದಲ್ಲಿ ಖಾತೆ ಅಸಮಾಧಾನ ತೀವ್ರ : ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಮುನಿಯಪ್ಪ ಬಹಿರಂಗ ಅಸಮಾಧಾನ !ಉದಯಕುಮಾರಗೆ ಪ್ರತಿಷ್ಠಿತ ಪ್ರಶಸ್ತಿಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಕಾನೂನು ಉತ್ಸವದಲ್ಲಿ ಸಾಧನೆ : ಸಾಧಕರಿಗೆ ಸನ್ಮಾನರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವೆ: ಡಿ.ಕೆ. ಶಿವಕುಮಾರ್ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆಬಿಜೆಪಿಗೆ ಆಘಾತ ; ಪಕ್ಷಕ್ಕೆ ರಾಜೀನಾಮೆ ನೀಡಿದ ತಮಿಳುನಾಡಿನ ಪ್ರಭಾವಿ ನಾಯಕ ಅಣ್ಣಾಮಲೈ