Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೊನೆಗೂ ಹೆದ್ದಾರಿ ದರೋಡೆಕೋರರನ್ನು ಬಂಧಿಸಿದ ಕಿತ್ತೂರು ಪೊಲೀಸರು

 

ಬೆಳಗಾವಿ :
ಕಿತ್ತೂರು ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪ ನಿದ್ರೆಗೆ ಜಾರಿದ್ದ ಕೊಚೇರಿಯ ವಾಹನ ಮಾಲೀಕರನ್ನು ಬೆದರಿಸಿ ಇತ್ತೀಚಿಗೆ 40,000 ರೂ. ಹಣ ಲೂಟಿ ಮಾಡಲಾಗಿತ್ತು. ಈ ಬಗ್ಗೆ ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತ ಹಬೀಬ್ ಶಿಲೇದಾರ ಅವರು ಸಹ ಈ ಬಗ್ಗೆ ಧ್ವನಿ ಎತ್ತಿ ಕಿತ್ತೂರು ಪೊಲೀಸರು ಘಟನೆಯನ್ನು ಗಂಭೀರವಾಗಿ ಗಮನಿಸಿ ದರೋಡೆಕೋರರ
ಹೆಡೆ ಮುರಿಕಟ್ಟುವಂತೆ ಒತ್ತಾಯಿಸಿದ್ದರು. ಇದೀಗ ಪೊಲೀಸರು ಈ ನಿಟ್ಟಿನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ದರೋಡೆಕೋರರು ಯಾರು ಎನ್ನುವುದನ್ನು ಕಂಡು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ತಡರಾತ್ರಿ ರಾಷ್ಟ್ರೀಯ ಹೆದ್ದಾರಿ ಬದಿಗೆ ವಾಹನ ನಿಲ್ಲಿಸಿ ಮಲಗಿಕೊಳ್ಳುತ್ತಿದ್ದ ಚಾಲಕರ ಗುರಿಯಾಗಿಸಿಕೊಂಡು ಅವರ ಬಳಿಯಿದ್ದ ದುಡ್ಡು ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ವೀರಾಪುರ ಓಣಿಯ ಭಜಂತ್ರಿ ಚಾಳದ ಕರೆಮ್ಮನ ಗುಡಿ ಬಳಿಯ ನಿವಾಸಿ ಸುರೇಶ ಪಂಡಿತ ಭಜಂತ್ರಿ (49) ಮತ್ತು ಹೆಬ್ಬಳ್ಳಿ ಚಾಳ ಮುರಳಿ ಕಟ್ಟಡ ಬಳಿಯ ನಿವಾಸಿ ಬಸವರಾಜ ಉರ್ಫ್ ರುದ್ರಪ್ಪ ಹುಚ್ಚಪ್ಪ ಹೆಬ್ಬಳ್ಳಿ (32) ಬಂಧಿತರಾಗಿದ್ದಾರೆ.

ಕಿತ್ತೂರು ಬಳಿಯ ಅಂಬಡಗಟ್ಟಿಯ 'ಸತೀಶಣ್ಣಾ ಕಲ್ಯಾಣ ಮಂಟಪ' ಮುಂದೆ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯ ಸಿದ್ದಯ್ಯ ಶಿವಾನಂದ ಡಂಗೂರ ಜೂನ್ 12ರಂದು ರಾತ್ರಿ ಕ್ರೂಸರ್ ಹಾಗೂ ಹುಕ್ಕೇರಿ ತಾಲೂಕಿನ ಕೊಚೇರಿ ಗ್ರಾಮದ ವಿರೂಪಾಕ್ಷಿ ರುದ್ರಪ್ಪ ನಾಯಕ ಮೇ 23ರಂದು ರಾತ್ರಿ ಟ್ರ್ಯಾಕ್ಟರ್ ನಿಲ್ಲಿಸಿ ಮಲಗಿದ್ದಾಗ ಅವರ ಜೇಬಿನಿಂದ ದುಡ್ಡು ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ದರೋಡೆಕೋರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಮುಂದೂಡಿಕೆಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆಗಣಿಕೊಪ್ಪ : ಶಾಸಕ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆವಿದ್ಯಾರ್ಥಿಗಳು  ಎನ್ ಸಿಸಿ   ಮಹತ್ವ ಮತ್ತು ಅದರ ಉಪಯೋಗ ಹಾಗೂ ಅನುಕೂಲಗಳ  ಮಾಹಿತಿ ಪಡೆಯಬೇಕು: ಪ್ರೊ . ಹನುಮಂತ ಬನ್ನೂರಇನ್ನಿಬ್ಬರಿಗೆ ಉಪ ಮುಖ್ಯಮಂತ್ರಿ ಹುದ್ದೆ ?ಈಜಲು ಬಾರದ ಕಾರಣ ಕೃಷಿ ಹೊಂಡದಲ್ಲಿ ಮುಳುಗಿ ಸಾವುನೀಟ್ ಪರೀಕ್ಷೆಯಲ್ಲಿ ಹೊಸಮನಿ ಸಹೋದರಿಯರ ಸಾಧನೆಹಾವು ಕಡಿತ ಔಷಧ: ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ