Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹೀಗೂ ಉಂಟೇ...! ಕುಮಾರ ಕೊಪ್ಪದನ ಕರಾಮತ್ತು..!! ಆತಂಕ ತಂದಿತ್ತು ಸ್ವಲ್ಪ ಹೊತ್ತು..!!!

*ಬೇರೆಡೆ ಗಲಾಟೆ ಮಾಡಿಕೊಂಡು ಹೆದರಿ ಡಿ.ಸಿ ಕಚೇರಿಯಲ್ಲಿ ಬಂದ ಫಿನಾಲ್ ಕುಡಿದ 'ಕುಮಾರ'..!

*ಕೊಪ್ಪರಿಗೆ ವೈಯಕ್ತಿಕ ಹಿನ್ನೆಲೆ ಹೊತ್ತ 'ಕೊಪ್ಪದ' ಸರಕಾರಿ ಸಮಸ್ಯೆಯೆಂದು ಬಿಂಬಿಸಿದ..!

*ಪೋಲೀಸ್ ತನಿಖೆಯಿಂದ ಬಯಲಾಯ್ತು..!

ಡಿ.ಸಿ. ಕಚೇರಿಯಲ್ಲಿ ಮಧ್ಯಾಹ್ನ ಫಿನಾಲ್ ಸೇವಿಸಿದ ಕುಮಾರನ ಕರಾಮತ್ತು ಬಯಲಾಗಿದೆ. ವೈಯಕ್ತಿಕ ಸಮಸ್ಯೆಯನ್ನು ಸರಕಾರಿ ಸಮಸ್ಯೆಯೆಂದು ಬಿಂಬಿಸುವ ತಂತ್ರ ಪೋಲೀಸ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.

ವೈಯಕ್ತಿಕ ಕಾರಣಕ್ಕೆ ಫಿನಾಯಿಲ್ ಸೇವನೆ : ಬೆಳಕಿಗೆ ಬಂತು ಮಹತ್ವದ ಅಂಶ

ಜನ ಜೀವಾಳ ಜಾಲ : ಬೆಳಗಾವಿ :
ಜಿಲ್ಲಾಧಿಕಾರಿ ಕಚೇರಿಯಲ್ಲಿ ಯುವಕ ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಅಂಶಗಳು ಲಭಿಸಿವೆ.

ಗೋಕಾಕ ಮೂಲದ ಕುಮಾರ ಕೊಪ್ಪದ (23) ಬುಧವಾರ ಮಧ್ಯಾಹ್ನ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಏಕಾಏಕಿ ಫಿನಾಯಿಲ್ ಸೇವಿಸಿದ್ದಾನೆ. ತಕ್ಷಣ ಪೊಲೀಸರು ಅವನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಅಗತ್ಯ ಚಿಕಿತ್ಸೆ ನೀಡಿದ್ದಾರೆ.
ನಂತರ ಪೊಲೀಸರು ಆತನ ಹಿನ್ನೆಲೆ ಕೆದಕಿದಾಗ ಮಹತ್ವದ ಅಂಶಗಳು ಗೊತ್ತಾಗಿವೆ.

ಜಿಲ್ಲಾಧಿಕಾರಿ ಕಚೇರಿಗೆ ಕೆಟ್ಟ ಹೆಸರು ತರಲು ವಿಷ ಸೇವನೆ ಪ್ರಯತ್ನ ಮಾಡಿದ್ದ. ಕುಮಾರ ಕೊಪ್ಪದ ಗೋಕಾಕ ಹಳ್ಳಿಯೊಂದರಲ್ಲಿ ಎರಡು ದಿನಗಳ ಹಿಂದೆ ಯಾವುದೋ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದ. ಆಗ ಅಲ್ಲಿನ ಜನ ಈತನ ವಿರುದ್ಧ ಪೋಲಿಸ್ ಸಹಾಯವಾಣಿ 112 ಕ್ಕೆ ಕರೆ ಮಾಡಿ ದೂರು ದಾಖಲು ಮಾಡಿದ್ದಾರೆ.

ಆಗ ಕುಮಾರನಿಗೆ ಏನು ಮಾಡಬೇಕು ಎಂದು ತೋಚದೆ ಅಲ್ಲಿಂದ ಪರರಿಯಾಗಿದ್ದಾನೆ.

ನೇರವಾಗಿ ಬೆಳಗಾವಿಗೆ ಬಂದು ಸಂಬಂಧಿಕರ ಮನೆಯಲ್ಲಿ ರಕ್ಷಣೆ ಕೋರಿದ್ದಾನೆ. ಎರಡು ದಿನಗಳ ಕಾಲ ಇದ್ದ ಅವನಿಗೆ ಸಂಬಂಧಿಕರು 200 ರೂಪಾಯಿ ನೀಡಿ ಹೋಗು ಎಂದು ಹೇಳಿ ಕಳಿಸಿದ್ದಾರೆ. ನಂತರ ಕುಮಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾನೆ. ಗೋಕಾಕಗೆ ಹೋದರೆ ತನ್ನ ವಿರುದ್ಧ ಕೇಸು ದಾಖಲು ಆಗಬಹುದು ಎಂದು ಭಯಗೊಂಡಿದ್ದಾನೆ. ಬೆಳಗಾವಿಯಲ್ಲಿ ಸಾಕಷ್ಟು ಸಂಚಾರ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ವೇಳೆ ಒತ್ತಡದಲ್ಲಿದ್ದ. ಫಿನಾಯಿಲ್ ಬಾಟಲಿಯೊಂದಿಗೆ ಆಗಮಿಸಿ ಅದನ್ನು ಸೇವಿಸಿದ್ದಾನೆ.

ಈ ಹಿಂದೆಯೇ ಆತ ಅಪರಾಧ ಪ್ರಕರಣ ನಡೆಸಿದ್ದ. ಯುವತಿಯ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದಿದ್ದ. ಯುವತಿಯ ಸಹೋದರ ಪೊಲೀಸ್. ಹಾಗಾಗಿ ಮೊನ್ನೆ ನಡೆದ ಹಾಗೂ ಈ ಹಿಂದಿನ ಯುವತಿಯ ಪ್ರಕರಣದಲ್ಲಿ ಭಾಗಿಯಾದ ತನಗೆ ಪೊಲೀಸರು ಶಿಕ್ಷೆ ನೀಡಬಹುದು ಎಂಬ ಭಯದಿಂದ ಮುಂದೇನು ಮಾಡಬೇಕು ಎಂದು ತೋಚದೆ ಫಿನಾಯಿಲ್ ಸೇವಿಸುವ ನಿರ್ಧಾರಕ್ಕೆ ಬಂದಿದ್ದಾನೆ.

ಈತ ರೈತ ಮತ್ತು ಕಾರ್ಮಿಕನಲ್ಲ. ಯಾವುದೇ ಸಮಸ್ಯೆ ಇಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬಂದಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇವನಿಗೆ ಸಂಬಂಧಪಟ್ಟ ಯಾವುದೇ ಫೈಲ್ ಇಲ್ಲ ಎಂಬ ಅಂಶ ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಒಟ್ಟಾರೆ ಜಿಲ್ಲಾಧಿಕಾರಿ ಕಚೇರಿಗೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಯುವಕ ತೀವ್ರ ಒತ್ತಡದಲ್ಲಿ ಈ ಕೃತ್ಯ ನಡೆಸಿರುವುದು ಬಯಲಾಗಿದೆ.

 
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ