Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಪ್ತರ್ಷಿಗಳ ಆಶೀರ್ವಾದ ಬಲದಿಂದ ಸಂಸ್ಥೆಗೆ ಅಳಿಲು ಸೇವೆ ಸಲ್ಲಿಸಿದೆ : ಡಾ.ಪ್ರಭಾಕರ ಕೋರೆ

ಕೆಎಲ್‍ಇ 40 ವರ್ಷಗಳ ಸಾರ್ಥಕ ಸೇವೆ – ಡಾ.ಪ್ರಭಾಕರ ಕೋರೆ ಅಭಿನಂದನಾ ಸಮಾರಂಭ

ಜನ ಜೀವಾಳ ಜಾಲ  ಬೆಳಗಾವಿ 8 ಜೂನ: ಚಿಕ್ಕವಯಸ್ಸಿನಲ್ಲಿಯೇ ಆಕಸ್ಮಿಕವಾಗಿ ಕೆಎಲ್‍ಇ ಸಂಸ್ಥೆಯ ಚೇರಮನ್‍ನಾಗಿ ಆಯ್ಕೆಯಾದೆ. ಹಲವಾರು ಸವಾಲುಗಳನ್ನು ಎದುರಿಸಿದೆ. ಎಲ್ಲರೂ ಸಹಕಾರ ನೀಡಿದರು. ಸಂಸ್ಥೆ ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು 40 ವಿಸ್ತರಿಸಿದೆ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.

ಅವರು ಬೆಳಗಾವಿ ಕನ್ನಡ ಭವನದಲ್ಲಿ ಕೆಎಲ್‍ಇ ಸಂಸ್ಥೆಯ ನಿವೃತ್ತ ಆಜೀವ ಸದಸ್ಯರು, ಪ್ರಾಚಾರ್ಯರು, ಪ್ರಾಧ್ಯಾಪಕರು, ಅಧ್ಯಾಪಕರು, ಸಿಬ್ಬಂದಿ, ಬೆಳಗಾವಿಯ ಸಂಘಸಂಸ್ಥೆಗಳು, ಕನ್ನಡ ಭವನ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಆಪ್ತಮಿತ್ರರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದರು.
ಬೃಹತ್ ಕೆಎಲ್‍ಇ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದೇ ಒಂದು ಭಾಗ್ಯ. ಅದು ನನ್ನದಾದುದು ಒಂದು ಆಕಸ್ಮಿಕ. ಅದನ್ನು ಅತ್ಯಂಥ ಸಮರ್ಥವಾಗಿ ನಿಭಾಯಿಸಿದೆ. ಪುಟ್ಟ ಗ್ರಾಮೀಣ ಪ್ರದೇಶದಿಂದ ಬಂದ ನನಗೆ ಎಲ್ಲರೂ ಕಾಲಕಾಲಕ್ಕೆ ಸಹಕಾರ ನೀಡಿದರು. ಮಾರ್ಗದರ್ಶಿಸಿದರು. ಇಂದು ಕೆಎಲ್‍ಇ ಒಂದು ನಾಮಾಂಕಿತ ಸಂಸ್ಥೆಯಾಗಿ ಬೆಳೆದುನಿಂತಿದೆ. ಕರ್ನಾಟಕ ಜನತೆಗೆ ಉತ್ತಮವಾದ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ನೀಡಬೇಕೆಂಬುದು ನನ್ನ ಹೆಬ್ಬಯಕೆಯಾಗಿತ್ತು. ಅದನ್ನು ಈಡೇರಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಹಿರಿಯ ರಾಜಕೀಯ ಧುರಣೀರಾಗಿದ್ದ ಎಸ್. ನಿಜಲಿಂಗಪ್ಪನವರು ಮೊದಲ್ಗೊಂಡು ಎಲ್ಲರೂ ನನಗೆ ಆಶೀರ್ವದಿಸಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ನನ್ನ ಶ್ರೀಮತಿ ಆಶಾ ಅವರು ಕೌಟುಂಬಿಕ ಎಲ್ಲ ಜವಾಬ್ದಾರಿಗಳನ್ನು ಹೊತ್ತು ನನ್ನ ಸಮಾಜ ಕೆಲಸಕ್ಕೆ ಅನುವು ಮಾಡಿಕೊಟ್ಟರು ಅದರ ಫಲವೆಂಬಂತೆ ನಾನು ಅಸಂಖ್ಯ ಕೆಲಸಗಳನ್ನು ಮಾಡಲು ಸಾಧ್ಯವಾಯಿತು ಎಂದರು. ಮುಂಬರುವ ಎರಡು ತಿಂಗಳಲ್ಲಿ ಕೆಎಲ್‍ಇ ಸಂಸ್ಥೆಯ 300 ಹಾಸಿಗೆಗಳ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆಯು ಲೋಕಾರ್ಪಣೆಗೊಳ್ಳಲಿದೆ. ಇದು ದೇಶದ ಅತ್ಯಾಧುನಿಕ, ಎಲ್ಲ ಸೌಕರ್ಯಗಳನ್ನು, ಉಪಕರಣಗಳನ್ನು ಹೊಂದಿರುವ ಆಸ್ಪತ್ರೆ ಎನಿಸಿಕೊಳ್ಳಲಿದೆ. ಆರೋಗ್ಯ ನೆಲೆಯಲ್ಲಿ ಸಂಸ್ಥೆಯು ಇನ್ನಷ್ಟು ಮಹತ್ವದ ಹೆಜ್ಜೆಗಳನ್ನು ಇಡಲಿದೆ. ಇದಕ್ಕೆ ನಿಮ್ಮೆಲ್ಲರ ಶುಭಹಾರೈಕೆ ಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ರಾಣಿ ಚೆನ್ನಮ್ಮ ವಿವಿ ಕುಲಪತಿಗಳಾದ ಡಾ.ಸಿ.ಎಂ.ತ್ಯಾಗರಾಜ ವಹಿಸಿ ಮಾತನಾಡುತ್ತ, ಡಾ.ಪ್ರಭಾಕರ ಕೋರೆಯವರು ತಮ್ಮ ಹೆಸರಿಗೆ ಅನ್ವರ್ಥರಾದವರು. ಒಂದು ಸಂಸ್ಥೆಯನ್ನು ಮಾತ್ರ ಕಟ್ಟಲಿಲ್ಲ ಅದನ್ನು ಗುಣಾತ್ಮಕವಾಗಿ ಬೆಳೆಸಿದರು, ವಿಸ್ತರಿಸಿದರು. ಇಂದು ಕೆಎಲ್‍ಇ ಸಂಸ್ಥೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಓದುತ್ತಿದ್ದಾರೆ. ಸಾವಿರಾರು ಕುಟುಂಬಗಳು ಉತ್ತಮವಾದ ಜೀವನವನ್ನು ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಏನೆಲ್ಲವನ್ನು ಮಾಡಲು ಸಾಧ್ಯವೆಂಬುದಕ್ಕೆ ಡಾ.ಕೋರೆಯವರು ಸಾಕ್ಷಿಪ್ರಜ್ಞೆಯಾಗಿ ನಮ್ಮ ಮುಂದೆ ನಿಂತಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿಯ ನಿವೃತ್ತ ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಮಾತನಾಡುತ್ತ, ಡಾ.ಕೋರೆಯವರ ಇಚ್ಛಾಶಕ್ತಿ ಅಪಾರವಾದುದು. ಅವರು ಸಂಸ್ಥೆಯ ಆಚೆಗೂ ಮೌಲಿಕವಾದ ಕೊಡುಗೆಯನ್ನು ನೀಡಿದರು. ಪ್ರಾಥಃಸ್ಮರಣೀಯರನ್ನು ಸ್ಮರಿಸಿದರು. ನಮ್ಮ ಸಮಾಜದ ಅಸ್ಮಿತೆಯಾಗಿ, ಸಾಂಸ್ಕøತಿಕ ರಾಯಬಾರಿಯಾಗಿ ಅವರು ನೀಡಿರುವ ಕೊಡುಗೆಗಳು ಅಸಂಖ್ಯ. ಅವರ ಸೇವೆಗೆ ಶಬ್ದ ನಿಲುಕದು. ಸಮಾಜ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಯುಎಸ್‍ಎಂ-ಕೆಎಲ್‍ಇ ನಿರ್ದೇಶಕರಾದ ಡಾ.ಎಚ್.ಬಿ.ರಾಜಶೇಖರ, ಬೆಳಗಾವಿ ಸ್ಪೋಟ್ರ್ಸ ಹಾಗೂ ಬೆಳಗಾಮ್ ಎಜ್ಯುಕೇಶನ್ ಸೊಸೈಟಿ ಚೇರಮನ್ ಅವಿನಾಶ ಪೋತದಾರ, ಖ್ಯಾತ ಸಾಹಿತಿಗಳಾದ ಡಾ.ವಿ.ಎಸ್.ಮಾಳಿ, ಡಾ.ಬಸವರಾಜ ಜಗಜಂಪಿ, ಡಾ.ಗುರುದೇವಿ ಹುಲೆಪ್ಪನವರಮಠ, ಕೆಎಲ್‍ಇ ನಿವೃತ್ತ ಜಂಟಿ ಕಾರ್ಯದರ್ಶಿ ಡಾ.ವಿ.ಬಿ.ಹಿರೇಮಠ, ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಅಧ್ಯಕ್ಷರಾದ ಎಸ್.ವೈ.ಕುಂದರಗಿ ಅಭಿನಂದನ ನುಡಿಗಳನ್ನಾಡಿಗಳನ್ನಾಡಿದರು. ಪ್ರಿ.ಬಿ.ಎಸ್.ಗವಿಮಠ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆಯವರ ‘ಶಿಖರ ಸೂರ್ಯ’ ಅಭಿನಂದನ ಗ್ರಂಥ ಸಂಪಾದಿಸಿದ ಡಾ.ಅಶೋಕ ನರೋಡೆಯವರನ್ನು, ಜನಜೀವಾಳ ಪತ್ರಿಕೆಯಿಂದ ಡಾ.ಕೋರೆಯವರ ಕುರಿತು ವಿಶೇಷಾಂಕ ಹೊರತಂದ ಶಿವರಾಯ ಏಳುಕೋಟಿ ಅವರನ್ನು, ಡಾ.ಪ್ರಭಾಕರ ಕೋರೆ ಭಾವಚಿತ್ರ ಬಿಡಿಸಿದ ಚಿತ್ರಕಲಾವಿದ ಬಾಳು ಸದಲಗೆ ಅವರನ್ನು ಡಾ.ಪ್ರಭಾಕರ ಕೋರೆಯವರು ಸತ್ಕರಿಸಿದರು. ಡಾ. ಎಫ್.ವ್ಹಿ.ಮಾನ್ವಿ, ಪ್ರೊ.ಎಸ್.ಎಸ್.ಉರಬಿನವರ, ಶ್ರೀ ಜಾವೂರ, ಸುಭಾಷ ಏಣಗಿ, ಪ್ರೊ. ವಿ.ಜಿ. ಅಷ್ಟಗಿ, ಪ್ರೊ.ಸಾಲಿಮಠ, ಪ್ರೊ ಎಸ್.ವಿ. ದಳವಾಯಿ, ಪ್ರೊ.ಎ.ಪಿ.ಬಿರಾದಾರ ಪಾಟೀಲ, ಡಾ.ಎಂ.ಟಿ.ಕುರಣಿ ಮೊದಲಾದವರು ಉಪಸ್ಥಿತರಿದ್ದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಯ.ರು.ಪಾಟೀಲ ವಂದಿಸಿದರು.

ಕೆ ಎಲ್ ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಅವರನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಕ್ರಿಯಾ ಸಮಿತಿಅಧ್ಯಕ್ಷ ಅಶೋಕ ಚಂದರಗಿ, ಮೈನೋದ್ದೀನ್ಮ ಮಕಾನದಾರ,ಶಿವಪ್ಪ ಶಮರಂತ,ಸಾಗರ ರ್ಬೋರಗಲ್ಲ, ವಿರೇಂದ್ರ ಗೋಬರಿ ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ