Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ಪಿಎಸ್ ಐ ಮೇಲೆ ಅತ್ಯಾಚಾರ ಆರೋಪ

Advertisement
ಜನ ಜೀವಾಳ ಜಾಲ: ಬೆಳಗಾವಿ  :ಬೆಳಗಾವಿ ನಗರದ ಪಿಎಸ್ಐ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಬೆಳಗಾವಿಯ ವೈರ್ ಲೆಸ್ ಪೊಲೀಸ್‌ ಸಬ್ ಇನ್ಸ್ಪೆಕ್ಟರ್  ಲಾಲ್ ಸಾಬ್ ಅಲ್ಲಸಾಬ್ ನದಾಫ್(28) ಪೋಲಿಸ್ ಕಚೇರಿಯಲ್ಲಿ ವೈರ್ಲೆಸ್ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಅವನ ವಿರುದ್ಧ ದೂರು ದಾಖಲಾಗಿದೆ. ಜನಗೌಡ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ.

ಘಟನೆ ವಿವರ : ದೂರುದಾರ ಯುವತಿ ರಾಮದುರ್ಗ ತಾಲೂಕಿನವರಾಗಿದ್ದು, ಬೆಳಗಾವಿ ಪೊಲೀಸ್ ಕಮಿಷನರ್ ರೇಟ್ ಕಚೇರಿ ವ್ಯಾಪ್ತಿಯಲ್ಲಿ ಬರುವ ವೈರ್ ಲೆಸ್ ಪಿಎಸ್ಐ ಲಾಲ್ ಸಾಬ್ ಅಲ್ಲಸಾಬ್ ನದಾಫ್ ಎಂಬುವವರೊಂದಿಗೆ 2020 ರ ಜೂನ್ ನಲ್ಲಿ ಫೇಸ್ಬುಕ್ ಮೂಲಕ ಪರಿಚಯವಾಗಿದೆ. ಇಬ್ಬರ ನಡುವೆ ಸ್ನೇಹ ಪರಸ್ಪರ ಪ್ರೇಮಕ್ಕೆ ತಿರುಗಿದೆ. ನಂತರ ಇಬ್ಬರ ನಡುವೆ ಮದುವೆ ಪ್ರಸ್ತಾಪವು ಆಗಿದೆ. ಈ ಸಂದರ್ಭದಲ್ಲಿ ದೂರದ ಸಂಬಂಧಿ ಎಂಬ ಅಂಶವು ಗೊತ್ತಾಗಿದೆ.

ನಂತರ ಲಾಲ್ ಸಾಬ್ ಯುವತಿಯನ್ನು ಬೆಳಗಾವಿಯ ಸುಭಾಷ್ ನಗರದ ತನ್ನ ಕೊಠಡಿಗೆ ಕರೆದುಕೊಂಡು ಹೋಗಿ ಬಲಾತ್ಕಾರಕ್ಕೆ ಪ್ರಯತ್ನಿಸಿದ್ದಾನೆ. ನಂತರ ಬೆಂಗಳೂರಿಗೂ ಕರೆದುಕೊಂಡು ಹೋಗಿ ಪುಸಲಾಯಿಸಿ ದೈಹಿಕ ಸಂಪರ್ಕ ಮಾಡುವಂತೆ ಒಪ್ಪಿಸಿದ್ದಾನೆ.

ಹಲವು ಬಾರಿ ನಮ್ಮಿಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿದೆ. ನನ್ನನ್ನು ಪತ್ನಿ ಎಂದೇ ಸಂಭೋಧಿಸುತ್ತಿದ್ದ. ಆದ್ದರಿಂದ ನಾನು ಧೈರ್ಯದಿಂದ ಇದ್ದೆ. ಆತ ಮದುವೆಯಾಗುವುದಾಗಿ ಹೇಳಿ ಬಾಂಡ್ ಸಹ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.

ಕಳೆದ 15 ದಿನಗಳ ಹಿಂದೆ ಲಾಲ್ ಸಾಬ್ ಅವರ ಅಣ್ಣ ಮಹಮ್ಮದ ನದಾಫ ಅವರಿಗೆ ಕರೆ ಮಾಡಿದಾಗ ಅವರು ಲಾಲ್ ಸಾಬ್ ಅನಾರೋಗ್ಯಕ್ಕೆ ತುತ್ತಾಗಿದ್ದು ಆರೋಗ್ಯ ಸುಧಾರಿಸುವವರೆಗೆ ಸಮಯ ಕೊಡಿ ಎಂದು ಹೇಳಿದ್ದಾರೆ. ಜೊತೆಗೆ ಆಗಾಗ ಮದುವೆ ವಿಷಯ ಪ್ರಸ್ತಾಪಿಸಿದಾಗ ನಾನು ನಿನ್ನನ್ನು ಮದುವೆಯಾಗುವುದಿಲ್ಲ. ಏನು ಮಾಡಿಕೊಳ್ಳುತ್ತೀಯೊ ಮಾಡಿಕೋ ಎಂದು ನನ್ನೊಂದಿಗೆ ಸಂಪರ್ಕ ಬಿಟ್ಟಿದ್ದಾನೆ. ಆದರೆ ಇದೀಗ ಫೆಬ್ರವರಿ 10 ರಂದು ಆತ ಮತ್ತೊಂದು ಮದುವೆಯಾಗಿದ್ದು, ತನಗೆ ಮೋಸ ಮಾಡಿರುವುದಾಗಿ ದೂರಿನಲ್ಲಿ ಯುವತಿ ತಿಳಿಸಿದ್ದಾಳೆ. ನನ್ನನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವತಿ ದೂರು ನೀಡಿದ್ದಾಳೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸಿಎಂ ಆದ ನಂತರ ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ‌ ಕೊಡ್ತೇನೆ ಅಂದ್ದಿದ್ದು ನಿಜ, ಆದರೆ…: ಸಿಎಂ ಡಿಕೆ ಶಿವಕುಮಾರ್ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ  ಗುಡುಗುಡಿಕೆಶಿ ಸಂಪುಟದಲ್ಲಿ ಖಾತೆ ಅಸಮಾಧಾನ ತೀವ್ರ : ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಮುನಿಯಪ್ಪ ಬಹಿರಂಗ ಅಸಮಾಧಾನ !ಉದಯಕುಮಾರಗೆ ಪ್ರತಿಷ್ಠಿತ ಪ್ರಶಸ್ತಿಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಕಾನೂನು ಉತ್ಸವದಲ್ಲಿ ಸಾಧನೆ : ಸಾಧಕರಿಗೆ ಸನ್ಮಾನರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವೆ: ಡಿ.ಕೆ. ಶಿವಕುಮಾರ್ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆಬಿಜೆಪಿಗೆ ಆಘಾತ ; ಪಕ್ಷಕ್ಕೆ ರಾಜೀನಾಮೆ ನೀಡಿದ ತಮಿಳುನಾಡಿನ ಪ್ರಭಾವಿ ನಾಯಕ ಅಣ್ಣಾಮಲೈ